ಗೋಣಿಕೊಪ್ಪಲು, ಸೆ. ೨೬: ಗೋಣಿಕೊಪ್ಪಲುವಿನ ಶ್ರೀ ಕಾವೇರಿ ದಸರಾ ಸಮಿತಿಯ ವತಿಯಿಂದ ನಡೆಯುವ ೪೪ನೇ ವರ್ಷದ ದಸರಾ ಜನೋತ್ಸವಕ್ಕೆ ಶಾಸಕ ಕೆ.ಜಿ. ಬೋಪಯ್ಯ ವಿಧ್ಯುಕ್ತ ಚಾಲನೆ ನೀಡಿದರು.

ಗೋಣಿಕೊಪ್ಪಲುವಿನ ಸ್ವಾತಂತ್ರö್ಯ ಹೋರಾಟಗಾರರ ಭವನದಲ್ಲಿ ಚಾಮುಂಡೇಶ್ವರಿ ದೇವಿಯನ್ನು ಪ್ರತಿಷ್ಠಾಪಿಸಲಾಗಿದ್ದು ಸೋಮವಾರ ಮುಂಜಾನೆ ಪೂಜಾ ಕೈಂಕರ್ಯಗಳು ನಡೆದವು. ಶಾಸಕರಾದ ಕೆ.ಜಿ. ಬೋಪಯ್ಯ ಚಾಮುಂಡೇಶ್ವರಿ ದೇವಿಗೆ ಮಾಲಾರ್ಪಣೆ ಮಾಡಿದರು. ಅರಮೇರಿ ಕಳಂಚೇರಿ ಮಠದ ಸ್ವಾಮೀಜಿಗಳಾದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿಗಳು ಆಶೀರ್ವಚನ ನೀಡಿದರು.

ಕಳೆದ ಹಲವು ವರ್ಷಗಳಿಂದ ದಸರಾ ಉತ್ಸವವನ್ನು ಜನೋತ್ಸವವಾಗಿ ಮಾಡಲು ಸಾಧ್ಯವಾಗಿರಲಿಲ್ಲ. ಇದೀಗ ಸಂಕಷ್ಟಗಳು ದೂರವಾಗಿವೆ. ದೇವಿ ಆರಾಧನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಜನೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯು ವಂತಾಗಲಿ ಎಂದು ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.

ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಮಾತನಾಡಿ, ನವರಾತ್ರಿ ಉತ್ಸವಕ್ಕೆ ವಿಶೇಷವಾದ ಗೌರವವಿದ್ದು ಇದನ್ನು ನಾವೆಲ್ಲರು ಚಾಚೂ ತಪ್ಪದೆ ಪಾಲಿಸುವ ಮೂಲಕ ಜನೋತ್ಸವವನ್ನು ಉತ್ತಮವಾಗಿ ನಡೆಸಲು ನಾಡಿನ ಜನತೆ ಸಹಕರಿಸುವಂತೆ ತಿಳಿಸಿದರು.

ಶ್ರೀ ಕಾವೇರಿ ದಸರಾ ಸಮಿತಿಯ ಅಧ್ಯಕ್ಷ ಬಿ.ಎನ್. ಪ್ರಕಾಶ್, ಕಾರ್ಯಾಧ್ಯಕ್ಷ ಸಿ.ಕೆ .ಬೋಪಣ್ಣ ಪ್ರಧಾನ ಕಾರ್ಯದರ್ಶಿ ಸುಬ್ಬಯ್ಯ, ಖಜಾಂಜಿ ಮಲ್ಚೀರ ಗಾಂಧಿ ದೇವಯ್ಯ, ಉಪಾಧ್ಯಕ್ಷ ಶಿವಾಜಿ, ಗ್ರಾ.ಪಂ. ಅಧ್ಯಕ್ಷೆ ಚೈತ್ರ, ದಶಮಂಟಪ ಸಮಿತಿ ಅಧ್ಯಕ್ಷ ಕಾಡ್ಯಮಾಡ ಚೇತನ್, ಕಾಡ್ಯಮಾಡ ಗಿರೀಶ್ ಗಣಪತಿ, ಕಡೇಮಾಡ ಸುನೀಲ್ ಮಾದಪ್ಪ, ರಾಮಕೃಷ್ಣ ಕೆ.ಪಿ. ಬೋಪಣ್ಣ, ಕಬ್ಬಚ್ಚಿರ ಸುಬ್ರಮಣಿ, ಎಂ.ಜಿ. ಮೋಹನ್, ಕೆ. ರಾಜೇಶ್, ಸುರೇಶ್‌ರೈ, ರಮೇಶ್, ಎಂ. ಮಂಜುಳ, ಕೊಣಿಯಂಡ ಬೋಜಮ್ಮ, ಶಾಂತೆಯAಡ ಮಧುಮಾಚಯ್ಯ, ತಿರುನೆಲ್ಲಿಮಾಡ ಜೀವನ್, ಪ್ರಭಾಕರ್ ನೆಲ್ಲಿತ್ತಾಯ, ಸೌಮ್ಯ ಬಾಲು, ಜಿ.ಕೆ. ಗೀತಾ, ಹೆಚ್.ಆರ್. ಜ್ಯೋತಿ, ವಿವೇಕ್ ರಾಯ್ಕರ್, ಆರ್. ಧನಲಕ್ಷಿö್ಮ ಸೇರಿದಂತೆ ಅನೇಕ ಪ್ರಮುಖರು ಭಾಗವಹಿಸಿದ್ದರು.