ವರದಿ : ಚನ್ನನಾಯಕ
ಪೊನ್ನಂಪೇಟೆ, ಸೆ.೨೬: ಬ್ರಹ್ಮಗಿರಿ ವನ್ಯಧಾಮ ವ್ಯಾಪ್ತಿಯ ಮಾಕುಟ್ಟ ಮೀಸಲು ಅರಣ್ಯ ವಲಯದ ವಿ.ಬಾಡಗ ಗ್ರಾಮದ ಸಮೀಪ ಇರುವ ಕೊಕ್ಕ ವೈಲ್ಡ್ ಲೈಫ್ ಕ್ಯಾಂಪ್‌ನಲ್ಲಿ ತಾ.೨೩ ರಂದು ಜಿಪಿಎಸ್ ಸರ್ವೆ ಕಾರ್ಯಾಚರಣೆಯ ವೇಳೆ ಕಡಿದಾದ ಬಂಡೆಗಳಿAದ ಕೂಡಿದ ದಟ್ಟಾರಣ್ಯದಲ್ಲಿ ದಿಢೀರ್ ನಾಪತ್ತೆಯಾಗಿದ್ದ ಅರಣ್ಯ ವೀಕ್ಷಕ, ತರುಣ್ (೨೩) ಕುಮಾರ್ ಮೃತ ದೇಹ ತಾ. ೨೬ ರಂದು ಬೆಳಿಗ್ಗೆ ೯ ಗಂಟೆಯ ಸಮಯದಲ್ಲಿ ಹೊಳೆಯಿಂದ ಹೊರ ತೆಗೆಯುವಲ್ಲಿ ಎನ್‌ಡಿಆರ್‌ಎಫ್ ಹಾಗೂ ಅರಣ್ಯ ರಕ್ಷಕರ ತಂಡ ಯಶಸ್ವಿಯಾಗಿದೆ.
ತರುಣ್ ಹೊಳೆಗೆ ಕಾಲು ಜಾರಿ ಬಿದ್ದಿದ್ದಾರೆ ಎಂದು ಹೇಳಲಾಗಿದ್ದ ಸ್ಥಳದಲ್ಲಿ ಕಡಿದಾದ ಬಂಡೆಗಳ ಮದ್ಯದಲ್ಲಿ ಸುಮಾರು ೪೦ ಅಡಿಗಳಿಗಿಂತಲೂ ಹೆಚ್ಚು ಆಳವಿದ್ದು, ನೀರು ಬಂಡೆಗಳ ಮೇಲಿನಿಂದ ಜಲಪಾತದ ರೀತಿಯಲ್ಲಿ ದುಮ್ಮಿಕ್ಕುತ್ತಿದ್ದ ಕಾರಣ ಕಾರ್ಯಾಚರಣೆ ತಂಡಕ್ಕೆ ಆತನ ದೇಹವನ್ನು ಪತ್ತೆ ಹಚ್ಚುವುದು ಅತ್ಯಂತ ಕಷ್ಟಕರವಾಗಿತ್ತು. ಈ ನಡುವೆ ಕಾರ್ಯಾಚರಣೆ
(ಮೊದಲ ಪುಟದಿಂದ) ನಡೆಸಿದ ಎನ್‌ಡಿಆರ್‌ಎಫ್ ತಂಡ ೪ ನೇ ದಿನದ ಕಾರ್ಯಾಚರಣೆಯಲ್ಲಿ ತರುಣ್ ದೇಹವನ್ನು ಪತ್ತೆ ಮಾಡಿದ್ದಾರೆ. ನಂತರ ಕಡಿದಾದ ದುರ್ಗಮ ಹಾದಿಯಲ್ಲಿ ಮೃತ ದೇಹವನ್ನು ಅರಣ್ಯ ಸಿಬ್ಬಂದಿಗಳ ನೆರವಿನೊಂದಿಗೆ ಸ್ಟçಕ್ಚರ್‌ನಲ್ಲಿ ಸುಮಾರು ೩ ಕಿಲೋ ಮೀಟರ್ ಗಿಂತಲೂ ಹೆಚ್ಚು ದೂರ ಹೊತ್ತು ವೈಲ್ಡ್ ಲೈಫ್ ಕ್ಯಾಂಪ್‌ಗೆ ತಂದರು. ಎನ್‌ಡಿಆರ್‌ಎಫ್, ವೈಲ್ಡ್ ಲೈಫ್ ಸಿಬ್ಬಂದಿ, ಅರಣ್ಯ ರಕ್ಷಕರ ತಂಡ, ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಳೆದ ಮೂರು ದಿನಗಳ ಕಾಲ ಕಠಿಣ ಪರಿಸ್ಥಿತಿಯ ನಡುವೆ ತೀವ್ರ ಶೋಧಕಾರ್ಯ ನಡೆಸಿದ್ದರು.
ಮುಳುಗು ತಜ್ಞರ ತಂಡ ಆಮ್ಲಜನಕ ಸಿಲಿಂಡರ್‌ನೊAದಿಗೆ ನೀರಿಗಿಳಿದು ಹುಡುಕಾಟ ನಡೆಸಿದರೂ ಕೂಡ, ಮೇಲಿನಿಂದ ಬೀಳುತ್ತಿರುವ ನೀರಿನ ರಭಸ ಹಾಗೂ ನೀರಿನೊಳಗೆ ಬಂಡೆಗಳು ಕಡಿದಾಗಿ ಇರುವ ಕಾರಣ ಕಾರ್ಯಾಚರಣೆಗೆ ಹಿನ್ನಡೆಯಾಗಿತ್ತು. ಕಾರ್ಯಾಚರಣೆ ತಂಡ ಅವಿರತ ಶ್ರಮದಿಂದ ೪ನೇ ದಿನದ ಕಾರ್ಯಾಚರಣೆಯ ಪ್ರಾರಂಭದಲ್ಲಿಯೇ ತರುಣ್‌ನ ಮೃತದೇಹವನ್ನು ಪತ್ತೆ ಹಚ್ಚಿದ್ದಾರೆ. ಪೊಲೀಸ್ ಇಲಾಖೆ ಕೂಡ ಕಾರ್ಯಾಚರಣೆಗೆ ಸಹಕಾರ ನೀಡಿತ್ತು.
ಮುಗಿಲು ಮುಟ್ಟಿದ ಪೋಷಕರ ಆಕ್ರಂದನ
ತರುಣ್ ಮೃತ ದೇಹವನ್ನು ಎನ್‌ಡಿಆರ್‌ಎಫ್ ಸಿಬ್ಬಂದಿ ಹೊತ್ತು ತರುತ್ತಿದ್ದಂತೆ ಕ್ಯಾಂಪ್‌ನಲ್ಲಿ ಇದ್ದ ಆತನ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ದುಡಿಯುವ ಹಂತಕ್ಕೆ ತಲುಪಿದ್ದ ಪ್ರಾಯದ ಮಗನನ್ನು ಕಳೆದು ಕೊಂಡ ತಾಯಿ ಹಾಗೂ ಸಂಬAಧಿಕರು ಮಗನ ದೇಹವನ್ನು ನೋಡಿ, ಗೋಳಾಡುತ್ತಾ ಕಣ್ಣೀರಿಡುತ್ತಿದ್ದ ದೃಶ್ಯ ಕರುಳು ಹಿಂಡುವAತಿತ್ತು. ಈ ಕರುಣಾಜನಕ ದೃಶ್ಯವನ್ನು ನೋಡಿ ಸ್ಥಳದಲ್ಲಿದ್ದ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಮಮ್ಮಲ ಮರುಗಿದರು. ಘಟನೆಯ ಬಗ್ಗೆ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,
ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಪೋಷಕರಿಗೆ ಹಸ್ತಾಂತರಿಸಲಾಯಿತು. ನಂತರ ಮೃತ ತರುಣ್ ಪೋಷಕರು ಅಂತ್ಯಕ್ರಿಯೆಗಾಗಿ ಮೃತದೇಹವನ್ನು ಬೆಂಗಳೂರಿನ ಬೊಮ್ಮಲೂರು ವಿನಲ್ಲಿರುವ ಮೃತನ ಸ್ವಗೃಹಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ಮೃತನ ಪೋಷಕರಿಗೆ ತಕ್ಷಣದ ಪರಿಹಾರವಾಗಿ ಇಲಾಖೆ ವತಿಯಿಂದ ೨ ಲಕ್ಷ ರೂಪಾಯಿ ಚೆಕ್ ನೀಡಲಾಗಿದೆ. ಶವ ಪರೀಕ್ಷೆ ವರದಿ ಬಂದ ನಂತರ ಜಿಲ್ಲಾ ವಿಪತ್ತು ನಿರ್ವಹಣಾ ನಿಧಿಯಿಂದ ೫ ಲಕ್ಷ ಹಾಗೂ ಟೈಗರ್ ಫೌಂಡೇಶನ್ ವತಿಯಿಂದ ೩ ಲಕ್ಷ ಪರಿಹಾರ ನೀಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆ್ಯಂಬ್ಯುಲೆನ್ಸ್ ಹಾಗೂ ಇತರ ಅಂತ್ಯಕ್ರಿಯೆ ಖರ್ಚು ವೆಚ್ಚಗಳಿಗಾಗಿ ಇಂದು ೨೬ ಸಾವಿರ ಹಣವನ್ನು ಫೋಷಕರಿಗೆ ನೀಡಿದ್ದಾರೆ.
ಈ ಸಂದರ್ಭ ಮಡಿಕೇರಿ ಡಿ.ಎಫ್.ಓ ಪೂವಯ್ಯ, ನಾಗರಹೊಳೆ ಡಿ.ಎಫ್.ಓ.ಶಿವರಾಮ್ ಬಾಬು, ಮಾಕುಟ್ಟ ವಲಯ ಅರಣ್ಯಾಧಿಕಾರಿ ವಿ.ಎಂ.ದೇಚಮ್ಮ, ಆರ್.ಎಫ್.ಓ.ವಿಮಲ್ ಬಾಬು, ಡಿ ವೈ ಎಸ್ ಪಿ ನಿರಂಜನ ರಾಜೇ ಅರಸ್, ವೀರಾಜಪೇಟೆ ಸರ್ಕಲ್ ಇನ್ಸ್ಪೆಕ್ಟರ್ ಬಿ.ಎಸ್.ಶಿವರುದ್ರಪ್ಪ, ವೀರಾಜಪೇಟೆ ಗ್ರಾಮಾಂತರ ಠಾಣೆ ಸಬ್ ಇನ್ಸ್ಪೆಕ್ಟರ್ ಡಿ.ಆರ್.ರವಿ ಕುಮಾರ್, ಎನ್.ಡಿ.ಆರ್.ಎಫ್. ಸಬ್ ಇನ್ಸ್ಪೆಕ್ಟರ್ ಶಾಂತಿಲಾಲ್, ನಿಟ್ಟೂರು ಗ್ರಾ.ಪಂ.ಅಧ್ಯಕ್ಷ ಕಾಟಿಮಾಡ ಶರೀನ್ ಮುತ್ತಣ್ಣ, ವೀರಾಜಪೇಟೆ ತಾಲೂಕು ಡಿಎಸ್‌ಎಸ್ ಸಂಚಾಲಕ ಹೆಚ್.ಸಿ.ರವಿ, ರಾಷ್ಟಿçÃಯ ಮಾನವ ಹಕ್ಕುಗಳ ಕೊಡಗು ಜಿಲ್ಲಾ ಅಧ್ಯಕ್ಷೆ ಪಡಿಕಲ್ ಕುಸುಮಾವತಿ, ಬಾಳೆಲೆ ಗ್ರಾ.ಪಂ.ಅಧ್ಯಕ್ಷ ಪೋಡಮಾಡ ಸುಕೇಶ್ ಭೀಮಯ್ಯ, ಗ್ರಾ.ಪಂ.ಸದಸ್ಯ ವಿನು ಉತ್ತಪ್ಪ, ತರುಣ್ ತಂದೆ ಮುನಿಯಪ್ಪ, ತಾಯಿ ಪುಷ್ಪ, ಅಜ್ಜಿ ಲಕ್ಷಿö್ಮ, ಸಂಬAಧಿಕರು, ಸ್ಥಳೀಯ ಗ್ರಾಮಸ್ಥರು ಹಾಗೂ ಬಾಳೆಲೆ ಗ್ರಾಮಸ್ಥರು ಇದ್ದರು.