ಸೋಮವಾರಪೇಟೆ, ಸೆ. ೨೬ : ಓಡಿಪಿ ಸಂಸ್ಥೆ, ಸಂತ ಜೋಸೆಫರ ಆಸ್ಪತ್ರೆ-ಮೈಸೂರು, ಕಾರಿಥಾಸ್ ಇಂಡಿಯಾ, ಸಂಘ ಮಿತ್ರ ಮೈಸೂರು, ಪ್ರಕೃತಿ ರೈತ ಉತ್ಪಾದಕರ ಕೂಟದ ವತಿಯಿಂದ ಸಮೀಪದ ಹಾನಗಲ್ಲು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷಿö್ಮÃ ಪಾಂಡಿಯನ್ ಉದ್ಘಾಟಿಸಿದರು. ಡಾ. ನಿತಿನ್ ರಾಜ್ ಅವರು ಸಾಮಾನ್ಯ ಖಾಯಿಲೆಗಳು ಹರಡುವ ವಿಧಾನ, ತಡೆಗಟ್ಟುವಿಕೆ, ಚಿಕಿತ್ಸಾ ಕ್ರಮಗಳ ಬಗ್ಗೆ ಮಾಹಿತಿ ಒದಗಿಸಿದರು. ಸಂಯೋಜಕ ಜಾನ್ ರೋಡ್ರಿಗಸ್ ಮಾತನಾಡಿ, ತಂಬಾಕು, ಧೂಮಪಾನ, ಮದ್ಯಪಾನಗಳನ್ನು ತ್ಯಜಿಸಬೇಕು. ಹೊರ ಭಾಗದ ತಿಂಡಿ ತಿನಿಸುಗಳಿಂದ ದೂರವಿದ್ದು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳ ಬೇಕೆಂದು ಸಲಹೆ ನೀಡಿದರು.
ಶಿಬಿರದಲ್ಲಿ ೧೨೦ ಮಂದಿಯ ಆರೋಗ್ಯ ತಪಾಸಣೆ ಮಾಡಿ, ಸಣ್ಣಪುಟ್ಟ ಖಾಯಿಲೆಗಳಿಗೆ ಸ್ಥಳದಲ್ಲೇ ಔಷಧ ನೀಡಲಾಯಿತು. ಆಸ್ಪತ್ರೆಯ ವೈದ್ಯರುಗಳಾದ ನಿತಿನ್ ರಾಜ್, ಆದಿತ್ಯ, ಹೆಲೆನ್ ಅವರುಗಳು ಆರೋಗ್ಯ ತಪಾಸಣೆ ನಡೆಸಿದರು. ಕಾರ್ಯಕ್ರಮದಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಹೆಚ್.ವಿ. ಮಿಥುನ್, ಪಿಡಿಓ ಅಸ್ಮಾ, ಪ್ರಕೃತಿ ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷ ರಾಜು ಪೊನ್ನಪ್ಪ, ಪ್ರಸಾದ್, ಸುರೇಶ್, ನಾಗರಾಜು, ಸಂತ ಜೋಸೆಫ್ ಆಸ್ಪತ್ರೆಯ ರುಡಾಲ್ಫ್, ಜಯಶ್ರೀ, ರೋಜಾಮೇರಿ, ಸಂದ್ಯಾ, ಮಮತ, ಪುನೀತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.