ಮಡಿಕೇರಿ, ಸೆ. ೨೫: ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀ ದಂಡಿನ ಮಾರಿಯಮ್ಮ ದೇವಾಲಯದಲ್ಲಿ ದಸರಾ ಹಬ್ಬದ ಪ್ರಯುಕ್ತ ಸೆ.೨೬ ರಿಂದ ಅ.೫ರ ವರೆಗೆ ದೇವಿಗೆ ವಿಶೇಷ ಅಲಂಕಾರ ಪೂಜೆ ನಡೆಯಲಿದೆ ಎಂದು ಅಲಂಕಾರ ಸಮಿತಿಯ ಅಧ್ಯಕ್ಷ ಸಿ.ಎಸ್.ರಂಜಿತ್ ಕುಮಾರ್, ಉಪಾಧ್ಯಕ್ಷ ಎಂ.ಎಲ್.ಸತೀಶ್ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಶ್ರೀ ದಂಡಿನ ಮಾರಿಯಮ್ಮ ದೇವಾಲಯವು ೯೨ನೇ ವರ್ಷದ ಅದ್ಧೂರಿ ದಸರಾ ಉತ್ಸವವನ್ನು ಆಚರಿಸುತ್ತಿದ್ದು, ಹತ್ತು ದಿನಗಳ ಕಾಲ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿವೆ ಎಂದರು.

ಸೆ.೨೬ ರಂದು ಬೆಳ್ಳಿಯ ಅಲಂಕಾರ, ಸೆ.೨೭ ರಂದು ಹೂವಿನ ಅಲಂಕಾರ, (ದುರ್ಗಾ ದೀಪ ನಮಸ್ಕಾರ ಪೂಜೆ ಸಂಜೆ ೬ ಗಂಟೆಗೆ, ಸೆ.೨೮ ರಂದು ಸೀರೆಯ ಅಲಂಕಾರ, ಸೆ.೨೯ ರಂದು ವಿಳ್ಯದೆಲೆಯ ಅಲಂಕಾರ, ಸೆ.೩೦ರಂದು ಗೆಜ್ಜೆ ವಸ್ತçದ ಅಲಂಕಾರ, ಅ.೧ ರಂದು ಧನಲಕ್ಷಿö್ಮ ದೇವಿಯ ಅಲಂಕಾರ, ಅ.೨ ರಂದು ಶಾರದ ದೇವಿಯ ಅಲಂಕಾರ (ರಂಗ ಪೂಜೆ ಸಂಜೆ ೬ ಗಂಟೆಗೆ), ಅ.೩ ರಂದು ಬಳೆಯ ಅಲಂಕಾರ, ಅ.೪ ರಂದು ನವಿಲು ಗರಿಯ ಅಲಂಕಾರ ಹಾಗೂ ಅ.೫ ರಂದು ವಜ್ರದ ಅಲಂಕಾರ ನೆರವೇರಲಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ಬಾರಿಯ ಉತ್ಸವವನ್ನು ವಿಜೃಂಭಣೆಯಿAದ ನಡೆಸಲು ಸಿದ್ಧತೆ ನಡೆಯುತ್ತಿದ್ದು, ಭಕ್ತಾಧಿಗಳು ಶ್ರೀ ದಂಡಿನ ಮಾರಿಯಮ್ಮ ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಮನವಿ ಮಾಡಿದರು.

ಅಲಂಕಾರ ಸೇವೆ, ದುರ್ಗಾದೀಪ ನಮಸ್ಕಾರ ಪೂಜೆ ಹಾಗೂ ರಂಗ ಪೂಜೆ ಮಾಡಲು ಇಚ್ಚಿಸುವ ಭಕ್ತಾಧಿಗಳು ೯೮೮೬೯೭೬೩೦೬, ೮೭೯೨೪೩೨೪೧೪ ಸಂಪರ್ಕಿಸಬಹುದಾಗಿದೆ.