ಸಿದ್ದಾಪುರ, ಸೆ. ೨೫: ರುಪ್ಸಾ ಕರ್ನಾಟಕ ಮಾನ್ಯತೆ ಪಡೆದ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘದ ವತಿಯಿಂದ ನೀಡುವ ಉತ್ತಮ ಶಾಲಾ ಆಡಳಿತ ಮಂಡಳಿ ಪ್ರಶಸ್ತಿಗೆ ನೆಲ್ಲಿಹುದಿಕೇರಿ ಗ್ರಾಮದ ಆಂಗ್ಲೋ ವರ್ನಾಕ್ಯುಲರ್ ಸಂಯುಕ್ತ ಪ್ರೌಢಶಾಲೆಯ ಮುಖ್ಯಸ್ಥ ಮಣಿ ಮೊಹಮ್ಮದ್ ಭಾಜನರಾಗಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘದ ಸಮಾರಂಭದಲ್ಲಿ ಉತ್ತಮ ಶಾಲಾ ಆಡಳಿತ ಮಂಡಳಿ ಎಂಬ ಪ್ರಶಸ್ತಿಯನ್ನು ನೆಲ್ಲಿಹುದಿಕೇರಿ ಗ್ರಾಮದ ಆಂಗ್ಲೋ ವರ್ನಾಕ್ಯುಲರ್ ಶಾಲೆಗೆ ನೀಡಲಾಗಿದೆ. ಈ ಶಾಲೆಯು ಕಳೆದ ೧೦ ವರ್ಷಗಳಿಂದ ೧೦ನೇ ತರಗತಿಯಲ್ಲಿ ಶೇ. ೧೦೦ ರಷ್ಟು ಫಲಿತಾಂಶ ಪಡೆದಿರುತ್ತದೆ. ಶಾಲಾ ಮುಖ್ಯಸ್ಥ ಮಣಿ ಮೊಹಮ್ಮದ್ ವಿವಿಧ ಸಂಘ-ಸAಸ್ಥೆಗಳಲ್ಲಿ ಹಾಗೂ ವಿದ್ಯಾಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದು, ಇವರ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.