ಸೋಮವಾರಪೇಟೆ, ಸೆ. ೨೫: ಇಲ್ಲಿನ ಶ್ರೀ ಸೋಮೇಶ್ವರ ದೇವಾಲಯದಲ್ಲಿ ತಾ. ೨೬ರಿಂದ (ಇಂದಿನಿAದ) ೨೧ನೇ ವರ್ಷದ ಶರವನ್ನವರಾತ್ರಿ ಉತ್ಸವ ನಡೆಯಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಶ್ರೀನಿವಾಸ್ ತಿಳಿಸಿದ್ದಾರೆ.
ತಾ. ೨೬ ರಿಂದ ಅ.೫ ರವರೆಗೆ ಶ್ರೀ ಸೋಮೇಶ್ವರ ದೇವಾಲಯದಲ್ಲಿರುವ ಶ್ರೀ ಶಕ್ತಿ ಪಾರ್ವತಿ ಸನ್ನಿಧಿಯಲ್ಲಿ ಶ್ರೀದೇವಿ ವಿಗ್ರಹವನ್ನು ಮೆರವಣಿಗೆ ಮೂಲಕ ದೇವಾಲಯಕ್ಕೆ ತಂದು ಪ್ರತಿಷ್ಠಾಪಿಸಲಾಗುವುದು.
ನವರಾತ್ರಿ ಹೂವಿನ ಅಲಂಕಾರ, ಶುಷ್ಕ ಫಲ ಅಲಂಕಾರ, ಹರಿದ್ರಾ ಕುಂಕುಮ ಅಲಂಕಾರ, ನಾಗಕನ್ನಿಕೆ ಅಲಂಕಾರ, ವೀಳ್ಯದೆಲೆ ಅಲಂಕಾರ, ಭಾರತಾಂಭೆ ಅಲಂಕಾರ, ಮಕ್ಕಳಿಗೆ ಅಕ್ಷರಾಭ್ಯಾಸ, ಅಕ್ಷರ ಪೂಜೆ, ದುರ್ಗಾ ಹೋಮದ ನಂತರ ದೇವಿ ವಿಗ್ರಹವನ್ನು ಅಲಂಕೃತ ಮಂಟಪದಲ್ಲಿ ಕುಳ್ಳಿರಿಸಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಆನೆಕೆರೆ ಬಳಿ ‘ಬನ್ನಿ’ ಹಂಚಿ ದೇವಿ ವಿಗ್ರಹವನ್ನು ಆನೆಕೆರೆಯಲ್ಲಿ ವಿಸರ್ಜಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.