ಮಡಿಕೇರಿ, ಸೆ. ೨೫: ತಾ.೧೭ರಿಂದ ೨೪ರವರೆಗೆ ಚೆನ್ನೆöÊನಲ್ಲಿ ನಡೆದ ಯೋನೆಕ್ಸ್ ಸನ್‌ರೈಸ್ ಆಲ್ ಇಂಡಿಯಾ ಮಾಸ್ರ‍್ಸ್ ರ‍್ಯಾಂಕಿAಗ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಕೊಡಗಿನಿಂದ ಕರ್ನಾಟಕವನ್ನು ಪ್ರತಿನಿಧಿಸಿರುವ ಜ್ಯೋತಿ ಸೋಮಯ್ಯ ತಾತಪಂಡ ಇವರು ೫೫ ವರ್ಷದ ಮಹಿಳೆಯರ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಮುಂಬೈನ ಸುರೇಖಾ ಸಟ್ಟಂ ಅವರನ್ನು ೨೧-೧೨, ೨೧-೧೪ ಪಾಯಿಂಟ್‌ಗಳಿAದ ನೇರ ಸೆಟ್‌ನಲ್ಲಿ ಸೋಲಿಸಿ ಇವರು ಚಿನ್ನದ ಪದಕವನ್ನು ಪಡೆದಿದ್ದಾರೆ. ಇವರು ಪ್ರಸ್ತುತ ಮಡಿಕೇರಿಯ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಮಕ್ಕಳಿಗೆ ಬ್ಯಾಡ್ಮಿಂಟನ್ ತರಬೇತಿಯನ್ನು ನೀಡುತ್ತಿದ್ದಾರೆ.