ಪೊನ್ನಂಪೇಟೆ. ಸೆ. ೨೪ : ಮಿಷನ್ ರೇಬಿಸ್ ಲಸಿಕಾ ಅಭಿಯಾನದಡಿಯಲ್ಲಿ ಪೊನ್ನಂಪೇಟೆ ಪಶುಪಾಲನ ಮತ್ತು ಪಶುವೈದ್ಯಕೀಯ ಸೇವೆಗಳ ವತಿಯಿಂದ ಹಾತೂರು ಗ್ರಾಮದ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರದಲ್ಲಿ ಸಾಕು ನಾಯಿಗಳಿಗೆ ರೇಬಿಸ್ ಚುಚ್ಚು ಮದ್ದು ನೀಡಲಾಯಿತು. ಹಾತೂರು ಹಾಗೂ ಸುತ್ತಮುತ್ತಲಿನ ಗ್ರಾಮದ ಸುಮಾರು ೮೦ ಕ್ಕೂ ಹೆಚ್ಚು ನಾಯಿಗಳಿಗೆ ಲಸಿಕೆ ನೀಡಲಾಯಿತು. ಪೊನ್ನಂಪೇಟೆ ಪಶು ವೈದ್ಯಾಧಿಕಾರಿ ಡಾ. ಶಾಂತೇಶ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಹಾತೂರು ಪಶು ಚಿಕಿತ್ಸಾ ಕೇಂದ್ರದ ಅಧಿಕಾರಿ ರವಿ, ಸಾಮಾಜಿಕ ಕಾರ್ಯಕರ್ತ ಪುಲಿಯಂಡ ರೋಷನ್ ಕಾಳಪ್ಪ, ರಮ್ಯಾ, ಇನ್ನಿತರರು ಹಾಜರಿದ್ದರು.