ಪೊನ್ನಂಪೇಟೆ, ಸೆ. ೨೪: ಮಾಕುಟ್ಟ ಮೀಸಲು ಅರಣ್ಯ ವಲಯದ ವಿ.ಬಾಡಗ ಗ್ರಾಮದ ಸಮೀಪದ ಕೊಕ್ಕ ವೈಲ್ಡ್ಲೈಫ್ ಕ್ಯಾಂಪ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅರಣ್ಯ ವೀಕ್ಷಕ ತರುಣ್ ಕುಮಾರ್ (೨೩) ತಾ. ೨೩ ರಂದು ಮಧ್ಯಾಹ್ನದ ಸಮಯದಲ್ಲಿ ಕೂಂಬಿAಗ್ ಕಾರ್ಯಾಚರಣೆಯ ವೇಳೆ ಆಕಸ್ಮಿಕವಾಗಿ ನದಿಗೆ ಬಿದ್ದಿರಬಹುದೆಂದು ಶಂಕಿಸಲಾಗಿದ್ದು, ಇನ್ನೂ ಕೂಡ ಆತನ ಸುಳಿವು ಪತ್ತೆಯಾಗಿಲ್ಲ.

ವೈಲ್ಡ್ಲೈಫ್ ಸಿಬ್ಬಂದಿ ಹಾಗೂ ಮಡಿಕೇರಿಯಿಂದ ಆಗಮಿಸಿರುವ ಎನ್‌ಡಿಆರ್‌ಎಫ್ ಸಿಬ್ಬಂದಿ ನಾಪತ್ತೆಯಾಗಿರುವ ತರುಣ್ ಪತ್ತೆಗಾಗಿ ಬಿರುಸಿನ ಶೋಧಕಾರ್ಯ ನಡೆಸುತ್ತಿದ್ದು, ಎರಡನೇ ದಿನದ ಕಾರ್ಯಾಚರಣೆಯಲ್ಲಿಯೂ ಕೂಡ ತರುಣ್ ಸುಳಿವು ಸಿಕ್ಕಿಲ್ಲ. ಕ್ಯಾಂಪ್ ಬಳಿಯೇ ಇರುವ ತರುಣ್ ಪೋಷಕರು ಹಾಗೂ ಸಂಬAಧಿಕರು ದುಃಖದ ಮಡುವಿನಲ್ಲಿದ್ದು, ನಾಪತ್ತೆಯಾಗಿರುವ ತರುಣ್ ಸುಳಿವಿನ ನಿರೀಕ್ಷೆಯಲ್ಲಿದ್ದಾರೆ. ಶೋಧ ಕಾರ್ಯಾಚರಣೆ ಮುಂದುವರೆದಿದೆ.

ತರುಣ್ ಬೆಂಗಳೂರಿನ ಮುನಿಯಪ್ಪ ಮತ್ತು ಪುಷ್ಪ ದಂಪತಿಯ ಪುತ್ರನಾಗಿದ್ದು, ಬಾಳೆಲೆಯ ಸಂಬAಧಿಕರ ಮನೆಯಲ್ಲಿ ವಾಸವಾಗಿದ್ದರು.

-ಚನ್ನನಾಯಕ