ಮಡಿಕೇರಿ, ಸೆ. ೨೪: ಪೈಂಟಿAಗ್ ಕೆಲಸ ಮಾಡುವ ಸಂದರ್ಭ ಕಬ್ಬಿಣದ ಸಲಾಕೆ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ಕಾರ್ಮಿಕನೋರ್ವ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಗರದ ದಾಸವಾಳ ರಸ್ತೆಯ ಬಳಿ ನಡೆದಿದೆ.
ಮೂಲತಃ ತಮಿಳುನಾಡು ರಾಜ್ಯದ ತಿರುಚನಪಳ್ಳಿಯ ರಮೇಶ್ ಕದಿರವೇಲು (೩೭) ಮೃತಪಟ್ಟ ದುರ್ಧೈವಿ.
ಇಲ್ಲಿನ ವೀರಭದ್ರೇಶ್ವರ ಮುನೀಶ್ವರ ದೇವಾಲಯದ ಪ್ರವೇಶದ್ವಾರಕ್ಕೆ ಬಣ್ಣ ಬಳಿಯುವ ಸಂದರ್ಭ ಘಟನೆ ಸಂಭವಿಸಿದೆ. ಅಟ್ಟಣಿಗೆ ಹತ್ತಿ ಪೈಟಿಂಗ್ ಕೆಲಸಕ್ಕೆ ಮುಂದಾಗುವಾಗ ಕಾರ್ಮಿಕನ ಕೈನಲ್ಲಿದ್ದ ಸಲಾಕೆಯೂ ವಿದ್ಯುತ್ ತಂತಿಗೆ ಆಕ್ಮಸಿಕವಾಗಿ ತಗುಲಿದೆ. ಪರಿಣಾಮ ವಿದ್ಯುತ್ ಸ್ಪರ್ಶದಿಂದ ಅಟ್ಟಣಿಗೆಯಿಂದ ಬಿದ್ದು ರಮೇಶ್ ಮೃತಪಟ್ಟಿದ್ದಾನೆ. ಸ್ಥಳದಲ್ಲಿದ್ದ ಕಾರ್ಮಿಕರು ಪಕ್ಕದ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ. ನಂತರ ಸ್ಥಳಕ್ಕಾಗಮಿಸಿದ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆಂದು ಜಿಲ್ಲಾಸ್ಪತ್ರೆ ಸಾಗಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಲವು ದಿನಗಳ ಹಿಂದೆಯಷ್ಟೆ ತಮಿಳುನಾಡಿನಿಂದ ರಮೇಶ್ ಆತನ ಸ್ನೇಹಿತನೊಂದಿಗೆ ಕೆಲಸಕ್ಕೆಂದು ಮಡಿಕೇರಿಗೆ ಬಂದಿದ್ದ ಎಂದು ತಿಳಿದು ಬಂದಿದೆ.