ನಾಪೋಕ್ಲು, ಸೆ. ೨೪: ನೆಲಜಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ೨೦೨೧-೨೨ರ ಸಾಲಿನಲ್ಲಿ ರೂ. ೪೬.೮೭ ಲಕ್ಷ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಂ.ಎA. ಅಪ್ಪಚ್ಚ ತಿಳಿಸಿದರು. ನೆಲಜಿ ಪ್ರಾಥಮಿಕ ಕೃಷಿ ಪತ್ತಿನ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಸಂಘದಲ್ಲಿ ೧,೨೫೪ ಮಂದಿ ಸದಸ್ಯರಿದ್ದು ಈ ಸಾಲಿನಲ್ಲಿ ೨೦೮.೮೮ ಕೋಟಿ ರೂಪಾಯಿ ವ್ಯವಹಾರ ನಡೆದಿದೆ. ಸಂಘದಲ್ಲಿ ಒಟ್ಟು ೧೧೫೪.೫೨ ಲಕ್ಷ ರೂಪಾಯಿ ಸಾಲ ವಿತರಿಸಲಾಗಿದೆ. ವರ್ಷಾಂತ್ಯಕ್ಕೆ ಒಟ್ಟು ರೂ. ೩೬೫.೮೪ ಲಕ್ಷ ಠೇವಣಿ ಹಾಗೂ ೭೨.೧೪ ಲಕ್ಷ ರೂಪಾಯಿ ಕ್ಷೇಮ ನಿಧಿಯನ್ನು ಹೊಂದಿದೆ. ಎಂದರು. ಮಹಾಸಭೆಯಲ್ಲಿ ಸದಸ್ಯರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು. ಈ ಸಂದರ್ಭ ಆಡಳಿತ ಮಂಡಳಿ ನಿರ್ದೇಶಕರು, ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಇದ್ದರು.