ಕಡಂಗ, ಸೆ. ೨೪: ಕಡಂಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಕೋಡಿರ ಎಂ. ತಮ್ಮಯ್ಯ ಅಧ್ಯಕ್ಷತೆಯಲ್ಲಿ ನಡೆಯಿತು.

ಸಂಘದಿAದ ಕಡಂಗದಲ್ಲಿ ಮೃತಪಟ್ಟ ಸದಸ್ಯರಿಗೆ ಸಂತಾಪ ಸೂಚನೆ, ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆಗೈದ ಸಂಘದ ಸದಸ್ಯರ ಮಕ್ಕಳಿಗೆ ಬಹುಮಾನ ಹಾಗೂ ಸಂಘದ ಪ್ರಗತಿಪರ ರೈತ ಸದಸ್ಯರಿಗೆ ಪ್ರಶಸ್ತಿ ವಿತರಿಸಲಾಯಿತು. ಡಿ.ಎ. ಬೋಪಣ್ಣ ಕಾರ್ಯಕ್ರಮಕ್ಕೂ ಮುನ್ನ ಪ್ರಾರ್ಥನೆ ನೆರವೇರಿಸಿದರು.

ಸಂಘವು ಅರಪಟ್ಟು, ಪೊದವಾಡ ಮತ್ತು ಕರಡ ಗ್ರಾಮಗಳ ಕಾರ್ಯವ್ಯಾಪ್ತಿ ಹೊಂದಿದ್ದು, ಪ್ರಸಕ್ತ ವರ್ಷದಲ್ಲಿ ಒಟ್ಟು ೮೫೯ ಜನ ಸದಸ್ಯರಿದ್ದು, ರೂ. ೧೩.೬೨ ಲಕ್ಷ ಲಾಭಗಳಿಸಿದೆ.

೨೦೨೧-೨೦೨೨ನೇ ಸಾಲಿನಲ್ಲಿ ರೂ. ೪.೮೨ ಕೋಟಿ ವ್ಯಾಪಾರ ವಹಿವಾಟು ನಡೆಸಿ ಪ್ರಸ್ತುತ ೨೦೨೧-೨೦೨೨ನೇ ಸಾಲಿಗೆ ಶೇ. ೧೦ ರಷ್ಟು ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ. ಸಂಘವು ಪ್ರಸ್ತುತ ಸಾಲಿನಲ್ಲಿ ರೂ. ೬.೬೬ ಕೋಟಿ ವಿವಿಧ ರೀತಿಯ ಠೇವಣಿಯನ್ನು ಸಂಗ್ರಹಿಸಲಾಗಿದೆ. ಸಂಘವು ೨೦೨೧-೨೨ನೇ ಸಾಲಿನಲ್ಲಿ ರೂ. ೧೨.೨೬ ಕೋಟಿ ಕೆ.ಸಿ.ಸಿ. ಸಾಲ, ಪಿಗ್ಮಿ ಓಡಿ ಸಾಲ, ಸ್ವ-ಸಹಾಯ ಗುಂಪುಗಳ ಸಾಲ ಮತ್ತು ಠೇವಣಿ ಮೇಲಿನ ಸಾಲವನ್ನು ನೀಡಿ, ಶೇ. ೧೦೦ ರಷ್ಟು ಸಾಲ ವಸೂಲಿಯಾಗಿದ್ದು, ಸಂಘವು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದು ತಮ್ಮಯ್ಯ ಅವರು ತಿಳಿಸಿದರು.