ರೂ. ೫.೭ ಲಕ್ಷ ಲಾಭ
ನಾಪೋಕ್ಲು, ಸೆ. ೨೪: ನಾಪೋಕ್ಲು ನಾಡು ಕೊಡವ ಸೌಹಾರ್ದ ಪತ್ತಿನ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ ರೂ.೫,೭೦,೬೨೮ ಲಾಭಗಳಿಸಿದೆ ಎಂದು ಸಹಕಾರಿ ಅಧ್ಯಕ್ಷ ಅಪ್ಪಾರಂಡ ಎಸ್. ಸುಧೀರ್ ಅಯ್ಯಪ್ಪ ಹೇಳಿದರು. ನಂ. ೫೭೨ನೇ ನಾಪೋಕ್ಲು ನಾಡು ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದ ೨೦೨೧ -೨೨ ರ ಸಾಲಿನ ವಾರ್ಷಿಕ ಮಹಾಸಭೆ ಇಲ್ಲಿನ ಕೊಡವ ಸಮಾಜದ ಅಪ್ಪಚ್ಚ ಕವಿ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಅಪ್ಪಾರಂಡ ಎಸ್. ಅಯ್ಯಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು. ಪ್ರಸ್ತುತ ಸಂಘವು ೭೧ ಸದಸ್ಯರನ್ನು ಹೊಂದಿದೆ. ಸಂಘವು ಸದಸ್ಯರಿಗೆ ಉತ್ತಮ ಸೇವೆಯನ್ನು ನೀಡುತ್ತಿದೆ ಎಂದರು. ಸಂಘದ ಗೌರವ ಅಧ್ಯಕ್ಷ, ಕೊಡವ ಸಮಾಜದ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಮಾತನಾಡಿ, ಸರ್ವ ಸದಸ್ಯರ ಸಹಕಾರದಿಂದ ಸಂಘವು ಅಭಿವೃದ್ಧಿ ಹೊಂದಿದೆ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಈ ಸಂದರ್ಭ ಮೃತಪಟ್ಟ ಸಂಘದ ಸದಸ್ಯರಿಗೆ ಸಂತಾಪ ಸೂಚಿಸಲಾಯಿತು. ಸಂಘದ ಲೆಕ್ಕಪತ್ರ ಮಂಡನೆ ಮಾಡಿ ಸಭೆಯ ಒಪ್ಪಿಗೆ ಪಡೆಯಲಾಯಿತು. ನಂತರ ಸಂಘದ ಅಭಿವೃದ್ಧಿಯ ಬಗ್ಗೆ ಸಮಗ್ರ ಚರ್ಚೆ ನಡೆದು ಕೆಲವು ನಿರ್ಧಾರಗಳನ್ನು ತೆಗೆದು ಕೊಳ್ಳಲಾಯಿತು. ಈ ಸಂದರ್ಭ ಸಂಘದ ನಿರ್ದೇಶಕ ಮಾಳೆಯಂಡ ಎ. ಅಯ್ಯಪ್ಪ, ಬೊಳ್ಳಿಯಂಡ ಪಿ. ಹರೀಶ್ ಕಾರ್ಯಪ್ಪ, ಮುಕ್ಕಾಟಿರ ಎಂ. ವಿನಯ್, ಕನ್ನಂಬಿರ ಸುಧಿ ತಿಮ್ಮಯ್ಯ, ಕಾಟುಮಣಿಯಂಡ ಉಮೇಶ್, ಚೋಕಿರ ಸಜಿತ್ ಚಿನ್ನಪ್ಪ, ಚೇನಂಡ ಗಿರೀಶ್, ಬಿದ್ದಾಟಂಡ ರಮೇಶ್ ಚೆಂಗಪ್ಪ, ಕುಂಡ್ಯೋಳAಡ ಸಿ. ಪೂವಯ್ಯ, ಮೂವೇರ ರೇಖಾ ಪ್ರಕಾಶ್, ಮುಖ್ಯ ಕಾರ್ಯನಿರ್ವಾಹಕ ಎಸ್.ಪಿ. ದೇವಯ್ಯ, ಸಿಬ್ಬಂದಿ ಕೆ.ಜಿ. ಸರಸ್ವತಿ, ಸಂಘದ ಸದಸ್ಯರು ಹಾಜರಿದ್ದರು.
ನಿರ್ದೇಶಕರಾದ ಕೋಟೆರ ನೈಲಾ ಸುರೇಶ್ ಪ್ರಾರ್ಥಿಸಿ, ಉಪಾಧ್ಯಕ್ಷ ಮಂಡೀರ ರಾಜಪ್ಪ ಚಂಗಪ್ಪ ಸ್ವಾಗತಿಸಿದರು. ನಿರ್ದೇಶಕ ಕುಲ್ಲೇಟಿರ ಅಜಿತ್ ನಾಣಯ್ಯ ವಂದಿಸಿದರು.