ಮಡಿಕೇರಿ, ಸೆ. ೨೫: ನಗರದ ನಾಲ್ಕು ಶಕ್ತಿ ದೇವತೆಗಳ ಕರಗಗಳು ತಾ. ೨೬ ರಂದು (ಇಂದು) ಸಂಜೆ ಪಂಪಿನ ಕೆರೆಯಿಂದ ಹೊರಟು ಕೋದಂಡ ರಾಮ ದೇವಾಲಯಕ್ಕೆ ಆಗಮಿಸಲಿದ್ದು, ರಾತ್ರಿ ೭ ಗಂಟೆಗೆ ದೇವಾಲಯದಲ್ಲಿ ಕರಗಗಳಿಗೆ ಪೂಜೆ ಹಾಗೂ ಭಕ್ತಾದಿಗಳಿಗೆ ಪ್ರಸಾದ ವಿತರಣೆ ನಡೆಯಲಿದೆ ಎಂದು ಕೋದಂಡ ರಾಮ ದೇವಾಲಯ ಟ್ರಸ್ಟ್, ಜ್ಯೋತಿ ಯುವಕ ಸಂಘ ಮತ್ತು ರಾಮ ಸೇವಾ ಸಮಿತಿ ಪ್ರಕಟಣೆ ತಿಳಿಸಿದೆ.