ಮಡಿಕೇರಿ, ಸೆ. ೨೪: ಸುನ್ನಿ ಯುವಜನ ಸಂಗAನ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಪ್ರವಾದಿ ಜನ್ಮದಿನದ ಅಂಗವಾಗಿ ತಾ. ೨೭ ರಂದು ಈದ್ ಮಿಲಾದ್ ಘೋಷಣಾ ರ‍್ಯಾಲಿ ಹಾಗೂ ಪ್ರವಾದಿ ಪ್ರೇಮದ ಬಗ್ಗೆ ಭಾಷಣ ಕಾರ್ಯಕ್ರಮ ನಡೆಯಲಿದೆ ಎಂದು ಸಮಿತಿಯ ಕಾರ್ಯದರ್ಶಿ ಅಬೂಬಕರ್ ದಾರಿಮಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನ್ಯಾಯ ಕೈ ಜಾರುತ್ತಿರುವ ಲೋಕ, ನ್ಯಾಯ ತುಂಬಿದ ಪ್ರವಾದಿ” ಎಂಬ ಘೋಷ ವಾಕ್ಯದೊಂದಿಗೆ ಪ್ರವಾದಿವರ್ಯರ ಜೀವನದ ಸಂದೇಶವನ್ನು ಸಾರಿ ಹೇಳುವ ಮೂಲಕÀ ನ್ಯಾಯ, ನೀತಿ, ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ಸಹಬಾಳ್ವೆ ಬಗ್ಗೆ ಅರಿವು ಮೂಡಿಸಲಾ ಗುವುದು. ಸುಸಂಸ್ಕೃತ ಹಾಗೂ ಪ್ರಜ್ಞಾವಂತ ಯುವ ಪೀಳಿಗೆಯನ್ನು ಮರಳಿ ಪಡೆಯುವುದರ ಮೂಲಕ ಉತ್ತಮ ಸಮಾಜದ ನಿರ್ಮಾಣದ ಅನಿವಾರ್ಯತೆಯನ್ನು ಮನವರಿಕೆ ಮಾಡಿಕೊಡುವುದು ಈ ಕಾರ್ಯ ಕ್ರಮದ ಉದ್ದೇಶವಾಗಿದೆ ಎಂದರು.
ತಾ. ೨೭ ರಂದು ಸಂಜೆ ೪ ಗಂಟೆಗೆ ಸಿದ್ದಾಪುರದ ಜುಮಾ ಮಸೀದಿಯ ಆವರಣದಲ್ಲಿ ರ‍್ಯಾಲಿ ಆರಂಭವಾಗಿ ಸಿದ್ದಾಪುರ ನಗರದ ಮೂಲಕ ಸಾಗಿ ನೆಲ್ಲಿಹುದಿಕೇರಿ ಶಾದಿ ಮಹಲ್ ಬಳಿ ಕೊನೆಗೊಳ್ಳಲಿದೆ. ನಂತರ ಮೌಲಿದ್ ಪಾರಾಯಣ ನಡೆಯಲಿದೆ ಎಂದು ತಿಳಿಸಿದರು.
ಮಗ್ರಿಬ್ ನಮಾಜಿನ ಬಳಿಕ ಸಮಸ್ತ ನೇತಾರರು, ವಕೀಲ, ಉಲಮಾ ಶ್ರೇಷ್ಠರು ಹಾಗೂ ಅಡ್ವಕೇಟ್ ಓಣಂಬಿಳ್ಳಿ ಮುಹಮ್ಮದ್ ಫೈಝಿ ಕಾರ್ಯಕ್ರಮದಲ್ಲಿ ಪ್ರವಾದಿ ಸ್ನೇಹದ ಅನಿವಾರ್ಯತೆಯ ಬಗ್ಗೆ ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ಅಬೂಬಕರ್ ಹೇಳಿದರು.
ಕಾರ್ಯಕ್ರಮವನ್ನು ಸಮಸ್ತ ಕೇಂದ್ರ ಮುಶಾವರ ಸದಸ್ಯ, ಕೊಡಗಿನ ಉಪ ಖಾಝಿ ಎಂ.ಎA. ಅಬ್ದುಲ್ಲಾ ಫೈಝಿ ಎಡಪಾಲ ಉದ್ಘಾಟಿಸಲಿದ್ದು, ಎಸ್‌ವೈಎಸ್ ಜಿಲ್ಲಾ ಸಮಿತಿಯ ಅಧ್ಯಕ್ಷ ಸಿ.ಪಿ.ಎಂ ಬಶೀರ್ ಹಾಜಿ ಅಧ್ಯಕ್ಷತೆ ವಹಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಸಿಪಿಎಂ ಬಶೀರ್ ಹಾಜಿ, ನಿರ್ವಾಹಕ ಕಾರ್ಯದರ್ಶಿ ಇಕ್ಬಾಲ್ ಮುಸ್ಲಿಯರ್, ಹನೀಫ್ ಮುಸ್ಲಿಯಾರ್, ಉಪಾಧ್ಯಕ್ಷ ಮುಹಮ್ಮದ್ ಆಲಿ ಹಾಗೂ ರಫೀಕ್ ಹಾಜಿ ಉಪಸ್ಥಿತರಿದ್ದರು.