ಕರಿಕೆ, ಸೆ. ೨೪: ಇಲ್ಲಿಗೆ ಸಮೀಪದ ಚೆತ್ತುಕಾಯ ಪಚ್ಚೆಪಿಲಾವು ಎಂಬಲ್ಲಿ ಕಾಡಾನೆ ದಾಳಿ ನಡೆಸಿ ಬೆಳೆ ಹಾನಿ ಮಾಡಿದ ಘಟನೆ ನಡೆದಿದೆ.
ಇಲ್ಲಿನ ಪಚ್ಚೆಪಿಲಾವು ಪಳ್ಳಿಕಳ ಎಂಬಲ್ಲಿ ಥೋಮಸ್ ಎಂಬವರ ಮನೆಯ ಹಿತ್ತಲಿನ ತೋಟಕ್ಕೆ ದಾಳಿ ಮಾಡಿದ ಕಾಡಾನೆ ಹಿಂಡು ಅಪಾರ ಪ್ರಮಾಣದ ಬಾಳೆ ಗಿಡಗಳನ್ನು ತಿಂದು ನಾಶ ಮಾಡಿದ್ದು, ಸಾವಿರಾರು ರೂಪಾಯಿ ನಷ್ಟ ಸಂಭವಿಸಿದೆ.