ಸೋಮವಾರಪೇಟೆ, ಸೆ. ೨೩ : ದೂರದ ಹಾರಂಗಿ ಮತ್ತು ಸಮೀಪದ ದುದ್ದುಗಲ್ಲು ಹೊಳೆಯಿಂದ ಸೋಮವಾರಪೇಟೆ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜಾಗುತ್ತಿದ್ದರೂ ಇಂದಿಗೂ ನೀರಿನ ಸಮಸ್ಯೆ ಬಗೆಹರಿದಿಲ್ಲ.
ವಾರ್ಷಿಕ ಕೋಟ್ಯಂತರ ರೂಪಾಯಿ ಕುಡಿಯುವ ನೀರಿಗೆ ಸಂಬAಧಿಸಿದAತೆ ಬಿಲ್ ಪಾವತಿಯಾಗುತ್ತಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಸಮಸ್ಯೆಗಳು ದೂರಾಗಿಲ್ಲ. ಈ ಹಿನ್ನೆಲೆ ಕೇಂದ್ರ ಸರ್ಕಾರದ ಅಮೃತ್ ಯೋಜನೆಯ ಲಾಭವನ್ನು ಪಡೆದುಕೊಳ್ಳಲು ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಮುಂದಾಗಿದ್ದು, ಇದಕ್ಕೆ ಸಂಬAಧಿಸಿದAತೆ ರೂ. ೧೩ ಕೋಟಿ ವೆಚ್ಚದ ಯೋಜನೆಯನ್ನು ಸಿದ್ಧಪಡಿಸಿ ಜಿಲ್ಲಾಧಿಕಾರಿಗಳ ಅನುಮೋದನೆಯೊಂದಿಗೆ ಡಿಪಿಆರ್ ಸರ್ವೆಗೆ ಕ್ರಮ ಕೈಗೊಂಡಿದೆ.
ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ೧೧ ವಾರ್ಡ್ಗಳಿದ್ದು, ೬೭೨೯ ಜನಸಂಖ್ಯೆಯಿದೆ. ೧೯೫೬ ಮನೆಗಳಿದ್ದು, ೧೬೮೨ ಮನೆಗಳಿಗೆ ಪಂಚಾಯಿತಿ ಯಿಂದ ಕುಡಿಯುವ ನೀರು ಒದಗಿಸಲಾಗುತ್ತಿದೆ. ಇದರೊಂದಿಗೆ ಹೊಟೇಲ್, ಕ್ಯಾಂಟೀನ್, ವಾಣಿಜ್ಯ ಮಳಿಗೆ ಸೇರಿದಂತೆ ೯೦ ವಾಣಿಜ್ಯ ಸಂಪರ್ಕ ನೀಡಲಾಗಿದೆ.
ವಾರ್ಡ್ಗಳು ಮತ್ತು ಪಟ್ಟಣದಲ್ಲಿ ಒಟ್ಟಾರೆ ೩೦ ಸಾರ್ವಜನಿಕ ಕುಡಿಯುವ ನೀರು ಸರಬರಾಜು ಮಾಡುವ ಟ್ಯಾಪ್ಗಳಿವೆ. ೨೭೪ ಮನೆಗಳು ಕುಡಿಯುವ ನೀರಿನ ಸ್ವಂತ ಮೂಲ (ಬೋರ್ವೆಲ್, ಬಾವಿ)ವನ್ನು ಒಳಗೊಂಡಿವೆ.
ಪ್ರಸ್ತುತ ಹಾರಂಗಿ ಹೊಳೆಯಿಂದ ಮತ್ತು ಹಾನಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ದುದ್ದುಗಲ್ಲು ಹೊಳೆಯಿಂದ ಪಟ್ಟಣಕ್ಕೆ ನೀರು ಸರಬರಾಜಾಗುತ್ತಿದೆ. ಹಾರಂಗಿಯಿAದ ಬರುವ ನೀರನ್ನು ಯಡವನಾಡು ಮತ್ತು ಬೇಳೂರು ಬಾಣೆ ಸಮೀಪ ಪಂಪ್ಹೌಸ್ ನಿರ್ಮಿಸಿ, ಅಲ್ಲಿಂದ ಮೋಟಾರ್ಗಳ ಮೂಲಕ ಪಟ್ಟಣದ ನೀರು ಶುದ್ಧೀಕರಣ ಘಟಕಕ್ಕೆ ‘ಡಂಪ್’ ಮಾಡಲಾಗುತ್ತಿದೆ
ಅಂತೆಯೇ ದುದ್ದುಗಲ್ಲು ಹೊಳೆಯಿಂದ ಎತ್ತುವ ನೀರನ್ನು ಹಾನಗಲ್ಲು ಬಳಿಯಲ್ಲಿ ಪಂಪ್ಹೌಸ್ ನಿರ್ಮಿಸಿ, ಅಲ್ಲಿಂದ ನೇರವಾಗಿ ಶುದ್ಧೀಕರಣ ಘಟಕಕ್ಕೆ ಹರಿಸಲಾಗುತ್ತಿದೆ. ಇಲ್ಲಿಂದ ತಾಲೂಕು ಕಚೇರಿ ಬಳಿಯಿರುವ ನೀರಿನ ಟ್ಯಾಂಕ್ ಸೇರಿದಂತೆ ವಾರ್ಡ್ಗಳ ಅಲ್ಲಲ್ಲಿ ಅಳವಡಿಸಿರುವ ಟ್ಯಾಂಕ್ಗಳಿಗೆ ತುಂಬಿಸಿ ನಂತರ ಮನೆಗಳಿಗೆ ಟ್ಯಾಪ್ಗಳ ಮೂಲಕ ಸರಬರಾಜು ಮಾಡಲಾಗಿದೆ.
ಇದೀಗ ಕೇಂದ್ರ ಸರ್ಕಾರವು ಗ್ರಾಮಾಂತರ ಪ್ರದೇಶದಲ್ಲಿ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಲು ಜಲಜೀವನ್ ಮಿಷನ್ ಯೋಜನೆಯನ್ನು ಜಾರಿಗೆ ತಂದಿದ್ದು, ಲಕ್ಷಾಂತರ
(ಮೊದಲ ಪುಟದಿಂದ) ರೂಪಾಯಿ ಅನುದಾನ ಬಿಡುಗಡೆ ಮಾಡಿದೆ. ಇದಕ್ಕೆ ರಾಜ್ಯ ಸರ್ಕಾರವೂ ಕೈಜೋಡಿಸಿದ್ದು, ಹಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈಗಾಗಲೇ ಕಾಮಗಾರಿ ಪೂರ್ಣಗೊಂಡಿದೆ.
ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ರುವ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಿಕೊಳ್ಳುವ ಸಂಬAಧ ಇದೀಗ ಕೇಂದ್ರ ಸರ್ಕಾರದ ಅಮೃತ್ ಯೋಜನೆಯನ್ನು ಬಳಸಿಕೊಳ್ಳಲು ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ ಮುಂದಾಗಿದ್ದು, ಈಗಾಗಲೇ (ಕೆಯುಡಬ್ಲೂö್ಯಎಸ್) ಕ್ರಿಯಾ ಯೋಜನೆ ತಯಾರಿಸಿದೆ. ೨೦೨೫ನೇ ಇಸವಿಯ ಜನಸಂಖ್ಯೆಗೆ ಅನುಗುಣ ವಾಗಿ ಬೇಕಾಗುವ ನೀರಿನ ಅವಶ್ಯಕತೆಗೆ ತಕ್ಕಂತೆ ಡಿ.ಪಿ.ಆರ್. ಸರ್ವೆ ನಡೆಯಲಿದೆ.
೧೩ ಕೋಟಿ ವೆಚ್ಚದ ಯೋಜನೆಗೆ ಜಿಲ್ಲಾಧಿಕಾರಿಗಳು ಅನುಮೋದನೆ ನೀಡಿದ್ದು, ಕರ್ನಾಟಕ ಅರ್ಬನ್ ವಾಟರ್ ಸಪ್ಲೆöÊ ಮೂಲಕ ಡಿಪಿಆರ್ (ಡೀಟೈಲ್ ಪ್ರಾಜೆಕ್ಟ್ ರಿಪೋರ್ಟ್) ತಯಾರಿಸಲು ಸಿದ್ಧತೆ ನಡೆಸಿದೆ. ಒಂದು ವೇಳೆ ಈ ಯೋಜನೆ ನಿರೀಕ್ಷಿತ ಮಟ್ಟದಲ್ಲಿ ಅನುಷ್ಠಾನ ಗೊಂಡಿದ್ದೇ ಆದಲ್ಲಿ ಸೋಮವಾg Àಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಲಭ್ಯವಾಗಲಿದೆ.
-ವಿಜಯ್ ಹಾನಗಲ್.