ವೀರಾಜಪೇಟೆ, ಸೆ. ೨೪: ಪೊನ್ನಂಪೇಟೆ ಕೊಡವ ಸಮಾಜ ಆಡಳಿತ ಮಂಡಳಿ ಮದುವೆ ಸಮಾರಂಭದ ಮೂಹೂರ್ತ ದಿನ ಮದ್ಯ ನಿಷೇಧ ಮಾಡಿ ವಿಶೇಷ ನಿರ್ಧಾರ ತೆಗೆದುಕೊಂಡಿರುವುದಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ರಾಜ್ಯಸಭಾ ಸದಸ್ಯ ಡಾ. ವಿರೇಂದ್ರ ಹೆಗ್ಗಡೆ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಪೊನ್ನಂಪೇಟೆ ಕೊಡವ ಸಮಾಜ ತೆಗೆದುಕೊಂಡ ನಿರ್ಧಾರ ಉತ್ತಮವಾಗಿದ್ದು ಈ ನಿರ್ಧಾರ ಇತರ ಕೊಡವ ಸಮಾಜಗಳಿಗೂ ಮಾದರಿಯಾಗಲಿ ಎಂದು ಅವರು ತಿಳಿಸಿದ್ದಾಗಿ ಧರ್ಮಸ್ಥಳ ಸಂಘದ ಯೋಜನಾಧಿಕಾರಿ ದಿನೇಶ್ ಗೌಡ ಹಾಗೂ ತಾಲೂಕು ಜನಜಾಗೃತಿ ಸಮಿತಿ ಅಧ್ಯಕ್ಷ ಬಾನಂಗಡ ಅರುಣ್ ಅವರುಗಳು ಮಾಹಿತಿ ನೀಡಿದರು.

ಒಂದು ಜವಬ್ದಾರಿಯುತ ಸಮಾಜ ತೆಗದುಕೊಳ್ಳುವ ನಿರ್ಧಾರಗಳು ಎಲ್ಲಾ ಸಮಾಜಗಳಿಗೂ ಮಾದರಿಯಾಗಲಿ ಎಂದಿದ್ದಾರೆ ಎಂದು ಹೇಳಿದರು.