ಪೊನ್ನಂಪೇಟೆ, ಸೆ. ೨೪: ವರ್ಷಂಪ್ರತಿ ಆಚರಿಸಲಾಗುವ, ವೀರಾಜಪೇಟೆ ಸಮೀಪದ ಇತಿಹಾಸ ಪ್ರಸಿದ್ಧ ಅಂಬಟ್ಟಿ ಮೊಕಾಂ ಉರೂಸ್(ನೇರ್ಚೆ)ಅನ್ನು ಮುಂದಿನ ಫೆಬ್ರವರಿ ೧೦ ರಿಂದ ೧೪ ರವರೆಗೆ ನಡೆಸಲು ಅಂಬಟ್ಟಿ ಮುಸ್ಲಿಂ ಜಮಾಅತ್ ಆಡಳಿತ ಮಂಡಳಿ ತೀರ್ಮಾನಿಸಿದೆ.

೫ ದಿನಗಳ ಕಾಲ ನಡೆಯುವ ಅಂಬಟ್ಟಿ ಮೊಕಾಂ ಉರೂಸ್‌ನಲ್ಲಿ ಪ್ರತಿದಿನ ಧಾರ್ಮಿಕ ಪ್ರಭಾಷಣ ಸೇರಿದಂತೆ ಫೆಬ್ರವರಿ ೧೩ ರಂದು ಸಾರ್ವಜನಿಕ ಸಮ್ಮೇಳನ ಹಾಗೂ ಸಾಮೂಹಿಕ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಲಿದೆ ಎಂದು ಅಂಬಟ್ಟಿ ಮುಸ್ಲಿಂ ಜಮಾಅತ್ ಆಡಳಿತ ಮಂಡಳಿ ಅಧ್ಯಕ್ಷ ಕೆ.ಎ. ಯೂಸುಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.