ಶನಿವಾರಸಂತೆ, ಸೆ. ೨೪: ಮದ್ಯಪಾನ ಮಾಡಲು ಹಣ ನೀಡದಿದ್ದಕ್ಕೆ ಮದ್ಯವ್ಯಸನಿ ಪತಿಯೊಬ್ಬ ಪತ್ನಿ, ಮಗಳ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದು, ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾ.೨೨ರಂದು ಪತ್ನಿ ಮಮತಾ ಕೆಲಸ ಮುಗಿಸಿ ಮನೆಗೆ ಬಂದಾಗ ಮನೆಯಲ್ಲಿದ್ದ ಪತಿ ಪ್ರೇಮ್ ಕುಮಾರ್ ಮದ್ಯಪಾನ ಮಾಡಲು ಹಣ ಕೇಳಿದ್ದು, ಇದನ್ನು ನಿರಾಕರಿಸಿ ಮಮತಾ ಮನೆಯಿಂದ ಹೊರಬಂದಾಗ ಒಳಗಿನಿಂದ ಬಾಗಿಲು ಹಾಕಿಕೊಂಡಿದ್ದ. ಕಾಲೇಜಿನಿಂದ ಮನೆಗೆ ಬಂದ ಮಗಳು ಕಾಂಪೌAಡ್‌ನಿAದ ಮನೆ ಮೇಲೆ ಹತ್ತಿ ಹಂಚು ತೆಗೆದು ಒಳಗಿಳಿದು ಬಾಗಿಲು ತೆಗೆದಿದ್ದಾಳೆ. ಈ ವೇಳೆ ಮಗಳ ಮೇಲೆ ಹಲ್ಲೆ ನಡೆಸಿ, ಚಾಕು ತೋರಿಸಿ ಮತ್ತೆ ಹೊಡೆಯಲು ಹೋದಾಗ ತಡೆಯಲು ಬಂದ ಮಮತಾ ಕೈಗೆ ತಗುಲಿ ಗಾಯಗಳಾಗಿವೆ. ಪಕ್ಕದ ಮನೆಯವರು ಮಮತಾಳನ್ನು ಸೋಮವಾರಪೇಟೆ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಪಡೆದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಗಾಯಾಳು ಮಮತಾ ನೀಡಿದ ಲಿಖಿತ ದೂರಿನ ಅನ್ವಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.