ಸುಂಟಿಕೊಪ್ಪ, ಸೆ. ೨೩: ಸುಂಟಿಕೊಪ್ಪ ವಾಹನ ಚಾಲಕರ ಸಂಘ ಈ ವರ್ಷ ೫೦ನೇ ವರ್ಷದ ಆಯುಧಪೂಜಾ ಸಮಾರಂಭ ಸುವರ್ಣ ಮಹೋತ್ಸವವನ್ನು ಅಕ್ಟೋಬರ್ ೪ ರಂದು ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಿದೆ. ದಿನದ ಅಂಗವಾಗಿ ಲಘುವಾಹನ, ದೊಡ್ಡವಾಹನ, ಆಟೋರಿಕ್ಷಾ, ಅಂಗಡಿ, ವರ್ಕ್ಶಾಪ್ಗಳ ಅಲಂಕಾರ ಹಾಗೂ ಮಂಟಪಗಳ ಶೋಭಾಯಾತ್ರೆ ಮತ್ತು ಇನ್ನಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅದಲ್ಲದೆ ಸ್ಥಳೀಯ ಶಾಲಾ ಮಕ್ಕಳಿಗೆ ಮತ್ತು ಸ್ಥಳೀಯ ಕಲಾವಿದರಿಗೆ ನೃತ್ಯ ಸ್ಪರ್ಧೆಯನ್ನು ನಡೆಸಿ ಬಹುಮಾನ ವಿತರಣೆಯನ್ನು ಮಾಡಲಾಗುತ್ತದೆ.
ಜಾತಿಮತ ಬೇಧವಿಲ್ಲದೆ ಆಯುಧ ಪೂಜೆ ಸುಂಟಿಕೊಪ್ಪದಲ್ಲಿ ನಡೆಸುತ್ತಿರುವುದು ಎಲ್ಲರಿಗೂ ಮಾದರಿಯಾಗಿದೆ. ೫೦ ವರ್ಷ ಪೂರೈಸುತ್ತಿರುವ ಈ ಸಂಘ ಈ ಬಾರಿ ಸುವರ್ಣ ಮಹೋತ್ಸವದ ಅಂಗವಾಗಿ ಅವಿಸ್ಮರಣೀಯ ಸಂಚಿಕೆಯನ್ನು ಬಿಡುಗಡೆಗೊಳಿಸುತ್ತಿದೆ ಎಂದು ಸಂಘದ ಅಧ್ಯಕ್ಷ ಬಿ.ಎಂ. ಪೂವಪ್ಪ ತಿಳಿಸಿದ್ದಾರೆ.
ಕಳೆದ ೩ ವರ್ಷಗಳಿಂದ ಪ್ರಕೃತಿ ವಿಕೋಪ ಹಾಗೂ ಕೊರೊನಾದಿಂದ ಕಳೆಗುಂದಿದ ಆಯುಧ ಪೂಜೆ ಈ ಬಾರಿ ಅದ್ಧೂರಿ ಆಚರಣೆಗೆ ಸಾಕ್ಷಿಯಾಗಲಿದೆ. ಅಂದು ರಾತ್ರಿ ೬ ಗಂಟೆಯಿAದ ಬೆಂಗಳೂರಿನ ನುರಿತ ಝೀ ಕನ್ನಡ ಸರಿಗಮಪ ಜ್ಯೂರಿ ಖ್ಯಾತಿಯ ಮಹೇಂದರ್ ತಂಡದಿAದ ಸಂಗೀತ ರಸಮಂಜರಿ ಕಾರ್ಯಕ್ರಮ ಹಾಗೂ ಡ್ಯಾನ್ಸ್ ಟ್ರೂಪ್ನಿಂದ ನೃತ್ಯ ಪ್ರದರ್ಶನ ನಡೆಯಲಿದೆ. ಕಳೆದ ೩ ವರ್ಷಗಳಿಂದ ಕಳೆಗುಂದಿದ ಆಯುಧಪೂಜೆ ಸಂಭ್ರಮ ಹಾಗೂ ಸುವರ್ಣ ಮಹೋತ್ಸವ ಆಚರಿಸಲು ಸಂಘದ ಅಧ್ಯಕ್ಷ ಬಿ.ಎಂ. ಪೂವಪ್ಪ, ಉಪಾಧ್ಯಕ್ಷ ಬಿ.ಎ. ಕೃಷ್ಣಪ್ಪ, ಎ.ಟಿ. ಚಂದ್ರಶೇಖರ್, ಗೌರವ ಅಧ್ಯಕ್ಷ ಎ. ಹಂಸ, ಕಾರ್ಯದರ್ಶಿ ಕುಂಞೆಕೃಷ್ಣ, ಖಜಾಂಚಿ ಎಸ್. ಸುರೇಶ್, ಜಂಟಿ ಕಾರ್ಯದರ್ಶಿ ಎಂ.ಎA. ಕುಮಾರ, ಪಿ.ಎಸ್. ರಕ್ಷಿತ್, ಸಂಘಟನಾ ಕಾರ್ಯದರ್ಶಿ ಎಂ.ಎA. ಸಾಬು, ಆತಿಕ್, ಶಕ್ತಿವೇಲು, ಮಣಿರಾಜ್ ಸೇರಿದಂತೆ ಸಂಘದ ಎಲ್ಲಾ ಸದಸ್ಯರು ಕೈ ಜೋಡಿಸಿದ್ದಾರೆ.