*ಗೋಣಿಕೊಪ್ಪ, ಸೆ. ೨೨: ತಾ. ೨೫ರಂದು ಗೋಣಿಕೊಪ್ಪ ಕೊಡಗು ಇಂಟರ್‌ನ್ಯಾಷನಲ್ ಸಭಾಂಗಣದಲ್ಲಿ ಕೊಡಗು ಹಿಂದೂ ಮಲಯಾಳಿ ಸಮಾಜದ ಓಣಂ ಆಚರಣೆ ಮತ್ತು ಪದಗ್ರಹಣ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಮಾಜದ ಅಧ್ಯಕ್ಷ ಎನ್.ಆರ್. ಅಮೃತ್ ರಾಜ ತಿಳಿಸಿದ್ದಾರೆ.

ಸಾಧಕ ವಿದ್ಯಾರ್ಥಿಗಳು, ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂತರ‍್ರಾಷ್ಟಿçÃಯ ಓಟಗಾರ್ತಿ, ರಾಜ್ಯಸಭಾ ಸದಸ್ಯೆ ಡಾ. ಪಿ. ಟಿ. ಉಷಾ, ಶಾಸಕ ಕೆ. ಜಿ. ಬೋಪಯ್ಯ, ಹೈಕೋರ್ಟ್ ಹಿರಿಯ ವಕೀಲ ಎ.ಎಸ್. ಪೊನ್ನಣ್ಣ, ಸುಪ್ರಿಂಕೋರ್ಟ್ ವಕೀಲ ಪ್ರತೀಶ್ ವಿಶ್ವನಾಥ್, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘಧ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಗೋಣಿಕೊಪ್ಪ ಪೊಲೀಸ್ ಉಪ ನಿರೀಕ್ಷಕ ಕೆ.ಪಿ. ದೀಕ್ಷಿತ್‌ಕುಮಾರ್, ಚಲನಚಿತ್ರ ನಿರ್ದೆಶಕಿ ಕೊಟ್ಟುಕತ್ತೀರ ಯಶೋಧಾ ಪ್ರಕಾಶ್, ಸಮಾಜದ ಗೌ. ಅಧ್ಯಕ್ಷ ಕೆ. ವೇಣುಗೋಪಾಲ್ ಮೆನೊನ್, ಸ್ಥಾಪಕ ಅಧ್ಯಕ್ಷ ಪಿ. ಎಸ್. ಶರತ್‌ಕಾಂತ್, ಕಾನೂನು ಸಲಹೆಗಾರ ಕೆ. ಬಿ. ಸಂಜೀವ್, ಉದ್ಯಮಿ ಕೆ. ಪಿ. ಮೀರಾ ಗೋಪಿನಾಥ್ ಪಾಲ್ಗೊಳ್ಳಲಿದ್ದಾರೆ ಎಂದು ಎಂದು ಸುದ್ದಿಗೋಷ್ಠೀಯಲ್ಲಿ ತಿಳಿಸಿದರು.

ಉಪಾಧ್ಯಕ್ಷ ಸುಬ್ರಮಣಿ ಮಾತನಾಡಿ, ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಶಿಕ್ಷಣ ಪಡೆಯುತ್ತಿರುವ ಸಮಾಜದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ, ಕ್ರೀಡೆಯಲ್ಲಿ ಸಾಧನೆ ಮಾಡಿರುವ ಸಮಾಜದ ಮಕ್ಕಳಿಗೆ ಪುರಸ್ಕಾರ ಕಾರ್ಯಕ್ರಮವಿದೆ. ರಕ್ತದಾನ, ಪ್ರಕಾಶ್, ಸಮಾಜದ ಗೌ. ಅಧ್ಯಕ್ಷ ಕೆ. ವೇಣುಗೋಪಾಲ್ ಮೆನೊನ್, ಸ್ಥಾಪಕ ಅಧ್ಯಕ್ಷ ಪಿ. ಎಸ್. ಶರತ್‌ಕಾಂತ್, ಕಾನೂನು ಸಲಹೆಗಾರ ಕೆ. ಬಿ. ಸಂಜೀವ್, ಉದ್ಯಮಿ ಕೆ. ಪಿ. ಮೀರಾ ಗೋಪಿನಾಥ್ ಪಾಲ್ಗೊಳ್ಳಲಿದ್ದಾರೆ ಎಂದು ಎಂದು ಸುದ್ದಿಗೋಷ್ಠೀಯಲ್ಲಿ ತಿಳಿಸಿದರು.

ಉಪಾಧ್ಯಕ್ಷ ಸುಬ್ರಮಣಿ ಮಾತನಾಡಿ, ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಶಿಕ್ಷಣ ಪಡೆಯುತ್ತಿರುವ ಸಮಾಜದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ, ಕ್ರೀಡೆಯಲ್ಲಿ ಸಾಧನೆ ಮಾಡಿರುವ ಸಮಾಜದ ಮಕ್ಕಳಿಗೆ ಪುರಸ್ಕಾರ ಕಾರ್ಯಕ್ರಮವಿದೆ. ರಕ್ತದಾನ, ಕರೊನಾ ವಾರಿಯರ್ ಸೇವಕರು, ಸಾಧಕ ಪತ್ರಕರ್ತರಿಗೆ ಸನ್ಮಾನ, ಆಂಜನೇಯ ಸೇವಾ ಟ್ರಸ್ಟ್ ಅಧ್ಯಕ್ಷೆ ಸ್ಮಿತಾ ಜಯಮೋಹನ್ ಸಮಾಜದ ಆಚಾರ-ವಿಚಾರದ ಬಗ್ಗೆ ವಿಚಾರ ಮಂಡನೆ ಮಾಡಲಿದ್ದಾರೆ ಎಂದು ತಿಳಿಸಿದರು.

ಓಣಂ ಸಧ್ಯ ಕಾರ್ಯಕ್ರಮದಲ್ಲಿ ಕೇರಳ ಮಾದರಿಯಲ್ಲಿ ಓಣಂ ಸಹಭೋಜನ ನಡೆಯಲಿದೆ. ಮಕ್ಕಳಿಂದ ಸಾಂಸ್ಕೃತಿಕ ಸ್ಪರ್ಧೆ, ಪೂಕಳಂ ಆಚರಣೆ ನಡೆಯಲಿದೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ಕಾರ್ಯದರ್ಶಿ ವೇಣುಗೋಪಾಲ್, ಜಂಟಿ ಕಾರ್ಯದರ್ಶಿ ಶ್ರೀಜಾ ಪ್ರದೀಪ್, ನಿರ್ದೇಶಕಿ ಸೌಮ್ಯಕೃಷ್ಣ ಇದ್ದರು.