ಸಿದ್ದಾಪುರ, ಸೆ. ೨೨: ವೀರಾಜಪೇಟೆ ಅರಣ್ಯ ವಲಯದ ಅಮ್ಮತ್ತಿ ವ್ಯಾಪ್ತಿಯ ಕುಂಬೇರಿ ಗ್ರಾಮದ ಮಾಚಿಮಂಡ ಮುತ್ತಪ್ಪ ಎಂಬವರ ಕಾಫಿ ತೋಟದಲ್ಲಿ ಅಕ್ರಮವಾಗಿ ಹಲಸು ಜಾತಿಯ ಮರಗಳನ್ನು ಕಡಿದು ನಾಟಾಗಳಾಗಿ ಪರಿವರ್ತಿಸಿ ಮಾರಾಟ ಮಾಡುವ ಉದ್ದೇಶದಿಂದ ದಾಸ್ತಾನು ಮಾಡಿರುವ ಬಗ್ಗೆ ವೀರಾಜಪೇಟೆ ಅರಣ್ಯ ವಲಯದ ಸಿಬ್ಬಂದಿಗಳು ಪತ್ತೆಹಚ್ಚಿ ಸ್ವತ್ತುಗಳನ್ನು ವಶಕ್ಕೆ ಪಡೆದುಕೊಂಡು ಮೂರು ಆರೋಪಿಗಳನ್ನು ಬಂಧಿಸಿದ್ದಾರೆ. ಆನಂಪುರ ಗ್ರಾಮದ ಚರಣ್ ರಾವ್, ನೆಲ್ಲಿಹುದಿಕೇರಿ ಗ್ರಾಮದ ರಶೀದ್ ಮತ್ತು ಅಸೈನಾರ್ ಈ.ಕೆ. ಬಂಧಿತ ಆರೋಪಿಗಳು. ಇವರಿಂದ ೨ ಲಕ್ಷ ರೂಪಾಯಿ ಮೌಲ್ಯದ ಸ್ವತ್ತನ್ನು ಇಲಾಖೆ ವಶಪಡಿಸಿಕೊಂಡಿದೆ.

ವೀರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮ್ ಬಾಬು ಎಂ. ಮತ್ತು ವೀರಾಜಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನೆಹುರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಕಳ್ಳೀರ ಎಂ. ದೇವಯ್ಯ, ಅರಣ್ಯಾಧಿಕಾರಿಗಳಾದ ದೇಯಂಡ ಸಂಜಿತ್ ಸೋಮಯ್ಯ, ಮೋನಿಷಾ ಎಂ.ಎಸ್., ಶ್ರೀಶೈಲ ಮಲ್ಲಪ್ಪ ಮಾಲಿಗೌಡ್ರ, ಆನದ ಕೆ.ಆರ್. ಸಚಿನ್ ನಿಂಬಾಳ್ಕರ್, ಎನ್.ಎನ್. ಅಕ್ಕಮ್ಮ, ಅನಿಲ್ ಸಿ.ಟಿ., ಅರಣ್ಯ ರಕ್ಷಕರಾದ ಅರುಣ ಸಿ. ಚಂದ್ರಶೇಖರ ಅಮರಗೋಳ, ನಾಗರಾಜ ರಡರಟ್ಟಿ, ಮಾಲತೇಶ ಬಡಿಗೇರ, ಟಿ.ಎನ್. ಪ್ರಶಾಂತ್ ಕುಮಾರ್, ವಾಹನ ಚಾಲಕರಾದ ಅಚ್ಚಯ್ಯ, ಅಶೋಕ ಹಾಗೂ ವೀರಾಜಪೇಟೆ ವಲಯ ಆರ್.ಆರ್.ಟಿ. ತಂಡದ ಸಿಬ್ಬದಿಗಳು ಭಾಗವಹಿಸಿದ್ದರು.