ಮಡಿಕೇರಿ, ಸೆ. ೨೩: ರೋಟರಿ ಕ್ಲಬ್ ಆಫ್ ಮಡಿಕೇರಿ ವುಡ್ಸ್ ಸಹಯೋಗದೊಂದಿಗೆ ಜಿಲ್ಲಾ ಯೋಜನೆ ‘ಆರೋಗ್ಯಸಿರಿ’ ಕಾರ್ಯಕ್ರಮದಡಿಯಲ್ಲಿ ಮಡಿಕೇರಿ ಅಶ್ವಿನಿ ಆಸ್ಪತ್ರೆ ಹಾಗೂ ಮೈಸೂರು ರಾಮಕೃಷ್ಣನಗರದ ಸುಯೋಗ್ ಆಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ ತಾ.೨೯ ರಂದು ಮಡಿಕೇರಿಯ ಅಶ್ವಿನಿ ಆಸ್ಪತ್ರೆಯಲ್ಲಿ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ. ಅಂದು ಬೆಳಿಗ್ಗೆ ೧೦ ಗಂಟೆಯಿAದ ಮಧ್ಯಾಹ್ನ ೩ ಗಂಟೆಯವರೆಗೆ ಶಿಬಿರ ನಡೆಯಲಿದೆ.

ತಜ್ಞ ವೈದ್ಯರಿಂದ ಸಾಮಾನ್ಯ ರೋಗ ತಪಾಸಣೆ, ಸ್ತಿçÃರೋಗ ಮತ್ತು ಪ್ರಸೂತಿ, ಮೂಳೆ ಮತ್ತು ಕೀಲು ರೋಗ ತಪಾಸಣೆ, ಮೂತ್ರ ರೋಗ ತಪಾಸಣೆ, ಕಿವಿ, ಮೂಗು ಮತ್ತು ಗಂಟಲು ತಪಾಸಣೆ, ಹೃದಯ ಸಂಬAಧಿ ಕಾಯಿಲೆ ತಪಾಸಣೆ, ರಕ್ತದೊತ್ತಡ, ಇ.ಸಿ.ಜಿ ಮತ್ತು ಎಕೋ ತಪಾಸಣೆ, ದಂತರೋಗ ತಪಾಸಣೆ ಹಾಗೂ ಕಣ್ಣಿನ ತಪಾಸಣೆ, ಸಕ್ಕರೆ ಕಾಯಿಲೆ ತಪಾಸಣೆಗಳನ್ನು ನಡೆಸಲಾಗುವುದು.

ಈ ಬಗ್ಗೆ ಇಂದು ಮಡಿಕೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ರೋಟರಿ ಮಡಿಕೇರಿ ವುಡ್ಸ್ ಅಧ್ಯಕ್ಷ ಸಂಪತ್ ಕುಮಾರ್ ಅವರು ರೋಟರಿ ವುಡ್ಸ್ ವತಿಯಿಂದ ಜಲಸಿರಿ, ವನಸಿರಿ, ವಿದ್ಯಾಸಿರಿಯಂತಹ ಹಲವು ಸಮಾಜ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಆರೋಗ್ಯಸಿರಿ ಯೋಜನೆಯಡಿಯಲ್ಲಿ ಬೃಹತ್ ಆರೋಗ್ಯ ಶಿಬಿರ ತಾ.೨೯ ರಂದು ನಡೆಯಲಿದೆ ಎಂದು ಮಾಹಿತಿ ಇತ್ತರು. ಅಶ್ವಿನಿ ಆಸ್ಪತ್ರೆ ಕಾರ್ಯದರ್ಶಿ ಕುಪ್ಪಂಡ ರಾಜಪ್ಪ ಅವರು ಮಾತನಾಡಿ, ರೋಟರಿ ವುಡ್ಸ್ನಂತೆ ಮುಂದಿನ ದಿನಗಳಲ್ಲಿ ಇತರ ಸಂಸ್ಥೆಗಳೂ ಮುಂದೆ ಬಂದು ಇಂತಹ ಸಮಾಜ ಸೇವಾ ಯೋಜನೆಗಳಿಗೆ ಕೈಜೋಡಿಸುವಂತಾಗ ಬೇಕೆಂದರು. ವಿಶ್ವ ಹಿಂದೂ ಪರಿಷತ್ ರಾಷ್ಟಿçÃಯ ಟ್ರಸ್ಟಿ ಛಾಯಾ ನಂಜಪ್ಪ, ರಾಜಪ್ಪ ಅವರು ಮಾತನಾಡಿ, ಕಳೆದೆರಡು ವರ್ಷಗಳಿಂದ ಅಶ್ವಿನಿ ಆಸ್ಪತ್ರೆ ಪ್ರಗತಿಯತ್ತ ಸಾಗುತ್ತಿದೆ. ರೋಟರಿ ಅಂಗ

(ಮೊದಲ ಪುಟದಿಂದ) ಸಂಸ್ಥೆಗಳಿAದ ಆಸ್ಪತ್ರೆಗೆ ಸುಮಾರು ರೂ.೫೦ ಲಕ್ಷದಷ್ಟು ಧನಸಹಾಯ ಒದಗಿಬಂದಿದೆ. ತಾ.೨೯ ರಂದು ನಡೆಯಲಿರುವ ಆರೋಗ್ಯ ಶಿಬಿರವನ್ನು ಸಮಾಜದಲ್ಲಿ ಆರ್ಥಿಕವಾಗಿ ಸಬಲರಲ್ಲದವರು ಸದುಪಯೋಗಪಡಿಸಿಕೊಳ್ಳುವಂತಾಗಬೇಕು. ಹೆಚ್ಚಿನ ಮಂದಿ ಶಿಬಿರದಲ್ಲಿ ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಕರೆ ನೀಡಿದರು. ಮುಂಬರುವ ದಿನಗಳಲ್ಲಿ ಹಾಡಿ ನಿವಾಸಿಗಳ ಕಾಲೋನಿಗಳಲ್ಲಿಯೂ ಆರೋಗ್ಯ ಶಿಬಿರಗಳನ್ನು ಆಯೋಜಿಸುವ ಪ್ರಯತ್ನ ಮಾಡಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ರೋಟರಿ ವುಡ್ಸ್ ಉಪಾಧ್ಯಕ್ಷೆ ಪದ್ಮ ಗಿರಿ ಇದ್ದರು.