ಚೆಯ್ಯಂಡಾಣೆ, ಸೆ. ೨೦: ಸ್ಥಳೀಯ ನರಿಯಂದಡ ಕೇಂದ್ರ ಪ್ರೌಢಶಾಲೆಯಲ್ಲಿ ನಾಪೋಕ್ಲು ಲಯನ್ಸ್ ಕ್ಲಬ್ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ನಾಪೋಕ್ಲು ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ಕೆ. ಮುತ್ತಪ್ಪ ಹಣ್ಣಿನ ಗಿಡ ನೆಟ್ಟು ಚಾಲನೆ ನೀಡಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಚೇನಂಡ ಗಿರೀಶ್ ಪೂಣಚ್ಚ ವಹಿಸಿದ್ದರು.
ಕಾರ್ಯಕ್ರಮದಲ್ಲಿ ನಾಪೋಕ್ಲು ಲಯನ್ಸ್ ಕ್ಲಬ್ ಅಧ್ಯಕ್ಷ ಕೆ. ಮುತ್ತಪ್ಪ ವನಮಹೋತ್ಸವದ ಕುರಿತು ವಿದ್ಯಾರ್ಥಿಗಳಿಗೆ ಗಿಡಗಳಿಂದಾಗುವ ಉಪಯೋಗಗಳ ಬಗ್ಗೆ ಪೂರ್ಣ ಮಾಹಿತಿ ನೀಡಿದರು.
ಕ್ಲಬ್‌ನ ವಲಯ ಅಧ್ಯಕ್ಷ ವಿನಯ್ ಮಾತನಾಡಿ ಹಣ್ಣಿನ ಗಿಡಗಳಿಂದಾಗುವ ಪ್ರಯೋಜನ, ಪ್ರಾಣಿ ಪಕ್ಷಿಗಳಿಗೆ ಗಿಡಗಳಿಂದ ದೊರೆಯುವ ಉಪಯೋಗದ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.
ಶಾಲೆಗೆ ಹಾಕಿ ಕಿಟ್ಟ್ ಕೊಡುಗೆ
ಅಂರ‍್ರಾಷ್ಟಿçÃಯ ಹಾಕಿ ಆಟಗಾರ ಕರಿನೆರವಂಡ ಸೋಮಣ್ಣ ಅವರ ತಂದೆ ಹಾಗೂ ಇದೆ ಶಾಲೆಯಲ್ಲಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಸಿಬ್ಬಂದಿಯಾದ ಕರಿನೆರವಂಡ ಮಂದಪ್ಪ ಅವರು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಹಾಕಿ ಕಿಟ್ಟನ್ನು ನೀಡಿದರು.
ಈ ಸಂದರ್ಭ ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ರಾಜೇಶ್ ಅಚ್ಚಯ್ಯ, ಉಪಾಧ್ಯಕ್ಷರಾದ ಪೆಮ್ಮಯ್ಯ, ಕೋಶಾಧಿಕಾರಿ ಪ್ರಕಾಶ್ ಆಡಳಿತ ಮಂಡಳಿ ಪದಾಧಿಕಾರಿಗಳು, ನಾಪೋಕ್ಲು ಲಯನ್ಸ್ ಕ್ಲಬ್ ಕಾರ್ಯದರ್ಶಿ ಸುದಿ ತಿಮ್ಮಯ್ಯ, ಕುಟ್ಟಪ್ಪ, ಬನ್ಸಿ, ಭೀಮಯ್ಯ, ವಸಂತ್ ಮುತ್ತಪ್ಪ, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.
ನಿರೂಪಣೆಯನ್ನು ದೈಹಿಕ ಶಿಕ್ಷಕ ಪೊನ್ನಪ್ಪ, ಸ್ವಾಗತವನ್ನು ಶಿಕ್ಷಕಿ ಸುನಿತಾ ಹಾಗೂ ವಂದನೆಯನ್ನು ರಾಜ್ ಕುಮಾರ್ ನಿರ್ವಹಿಸಿದರು.