ಸೋಮವಾರಪೇಟೆ, ಸೆ. ೨೦: ತಾಲೂಕಿನ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ವಿಮಲಾಕ್ಷಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಹಿಂದೆ ಏರ್ಪಟ್ಟಿದ್ದ ಒಡಂಬಡಿಕೆಯAತೆ ಈವರೆಗೆ ಅಧ್ಯಕ್ಷೆಯಾಗಿದ್ದ ಡಿ.ಈ. ರಮ್ಯ ಅವರು ರಾಜೀನಾಮೆ ಸಲ್ಲಿಸಿದ್ದರಿಂದ ನೂತನ ಅಧ್ಯಕ್ಷರ ಆಯ್ಕೆ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ವಿಮಲಾಕ್ಷಿ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾದರು. ಚುನಾವಣಾಧಿ ಕಾರಿಯಾಗಿ ಕ್ಷೇತ್ರಶಿಕ್ಷಣಾಧಿಕಾರಿ ಕೆ.ವಿ. ಸುರೇಶ್ ಕಾರ್ಯ ನಿರ್ವಹಿಸಿದರು.

ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಡಿ. ಈ. ರಮ್ಯ, ಜೋಯಪ್ಪ, ತಮ್ಮಯ್ಯ, ಬಸವಕುಮಾರ್, ಶಿವಮ್ಮ, ಅಭಿವೃದ್ಧಿ ಅಧಿಕಾರಿ ರವಿ ಕೆ. ನಾಯರ್, ಬಿಇಓ ಕಚೇರಿ ಅಧೀಕ್ಷಕ ಕಿರಣ್ ಸೇರಿದಂತೆ ಇತರರು ಉಪಸ್ಥಿತರಿದ್ದರು.