, ಸೆ. ೨೧: ಶಿಕ್ಷಕರು ಸಮಾಜಕ್ಕೆ ಉತ್ತಮ ವ್ಯಕ್ತಿಗಳನ್ನು ಸೃಷ್ಟಿಸುವ ರೂವಾರಿಗಳು. ಇವರ ಸೇವೆ, ಕರ್ತವ್ಯ ಅತ್ಯಂತ ಪ್ರಮುಖವಾಗಿದ್ದು ಗುರುತರವಾದ ಜವಾಬ್ದಾರಿಯೂ ಆಗಿದೆ. ಪ್ರಸ್ತುತದ ಸಮಾಜದಲ್ಲಿ ಸತ್ಪçಜೆಗಳನ್ನು ದೇಶಕ್ಕೆ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಭಾರೀ ಮಹತ್ವದ್ದಾಗಿದೆ. ಈ ಕಾಯಕದಲ್ಲಿ ತೊಡಗಿಸಿಕೊಂಡಿರುವ ಶಿಕ್ಷಕರನ್ನು ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಶಿಕ್ಷಣ ಇಲಾಖೆ, ಸರಕಾರ ಗುರುತಿಸಿ ವರ್ಷಂಪ್ರತಿ ಪ್ರಶಸ್ತಿಯನ್ನು ನೀಡುತ್ತಿದೆ. ರಾಜ್ಯ ಪ್ರಶಸ್ತಿಯೊಂದಿಗೆ ಜಿಲ್ಲಾ ಮಟ್ಟದಲ್ಲೂ ಆಯ್ದ ಶಿಕ್ಷಕರುಗಳನ್ನು ಗೌರವಿಸುವದು ವಾಡಿಕೆ.

ಈ ಬಾರಿ ಕೊಡಗಿನಿಂದ ಒಬ್ಬರು ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದರೆ ಪ್ರೌಢಶಾಲಾ ವಿಭಾಗದಲ್ಲಿ ಮೂವರು ಹಾಗೂ ಪ್ರಾಥಮಿಕ ಶಾಲಾ ವಿಭಾಗದಲ್ಲಿ ೭ ಶಿಕ್ಷಕರುಗಳಿಗೆ ಜಿಲ್ಲಾ ಪ್ರಶಸ್ತಿ ನೀಡಲಾಗಿದೆ. ಈ ಶಿಕ್ಷಕರುಗಳ ಅಭಿಪ್ರಾಯಗಳನ್ನು ಇಲ್ಲಿ ನೀಡಲಾಗಿದೆ.