ಸಿದ್ದಾಪುರ, ಸೆ. ೨೦: ಕಳೆದ ಮೂರು ವರ್ಷಗಳಿಂದ ನಡೆಯದಿದ್ದ ನೆಲ್ಯಹುದಿಕೇರಿ ಗ್ರಾ.ಪಂ.ಯ ಗ್ರಾಮ ಸಭೆಯು ಗ್ರಾ.ಪಂ ಅಧ್ಯಕ್ಷ ಎ.ಕೆ. ಹಕೀಂ ಅಧ್ಯಕ್ಷತೆಯಲ್ಲಿ ಮಂಗಳವಾರ ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ೨೦೧೯ ರ ವರದಿ ವಾಚನ ಮಾಡುವ ಸಂದರ್ಭ ಜನರು ಆಕ್ಷೇಪಿಸಿದ ಪ್ರಸಂಗ ನಡೆಯಿತು.

ಹಳೆಯ ವರದಿಯನ್ನು ವಾಚಿಸುತ್ತಿ ರುವುದು ದುರದೃಷ್ಟಕರ ಸಂಗತಿ ಎಂದು ಗ್ರಾಮಸ್ಥರು ಆರೋಪಿಸಿದ್ದು, ಮೂರು ವರ್ಷಗಳಿಂದ ಗ್ರಾಮಸಭೆಯನ್ನು ನಡೆಸದೇ ಇರುವ ಗ್ರಾ.ಪಂ. ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಗ್ರಾಮಸ್ಥರಾದ ವಸಂತ್ ಕುಮಾರ್ ಒತ್ತಾಯಿಸಿದರು.

ಕಲುಷಿತ ನೀರು ತಂದ ಗ್ರಾಮಸ್ಥರು

ನೆಲ್ಯಹುದಿಕೇರಿ ಗ್ರಾಮದ ಬೆಟ್ಟದ ಕಾಡು ವ್ಯಾಪ್ತಿಯಲ್ಲಿ ಪಂಚಾಯಿತಿ ವತಿಯಿಂದ ನೀಡುವ ನೀರು ಕಲುಷಿತ ವಾಗಿದ್ದು ಕುಡಿಯಲು ಯೋಗ್ಯವಿಲ್ಲ ದಂತಾಗಿದೆ ಎಂದು ಆರೋಪಿಸಿ ಮಹಿಳೆಯೋರ್ವರು ಕಲುಷಿತ ನೀರನ್ನು ಗ್ರಾಮ ಸಭೆಯಲ್ಲಿ ಪ್ರದರ್ಶಿಸಿದ್ದರು.

ನೆಲ್ಯಹುದಿಕೇರಿಯು ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಈ ವ್ಯಾಪ್ತಿ ಯಲ್ಲಿ ಸಾವಿರಾರು ವಿದ್ಯಾರ್ಥಿಗಳು, ಸಾರ್ವಜನಿಕರು ನಗರದಲ್ಲಿ ಸಂಚರಿ ಸುತ್ತಿರುತ್ತಾರೆ. ಇಲ್ಲಿ ಮಹಿಳೆಯರು ಹಾಗೂ ವೃದ್ಧರು ಶೌಚಾಲಯ ಇಲ್ಲದೆ ಪರದಾಡುವಂತಾಗಿದೆ. ಈ ಕುರಿತು ಹಲವಾರು ಬಾರಿ ಪ್ರತಿಭಟನೆ, ಮನವಿ ನೀಡಿದ್ದರೂ ಪ್ರಯೋಜನವಿಲ್ಲ ಎಂದು ಪಿ.ಆರ್. ಭರತ್ ಆಕ್ರೋಶ ವ್ಯಕ್ತಪಡಿಸಿದಲ್ಲದೆ, ಸಭೆಯಲ್ಲಿ ಗ್ರಾ.ಪಂ. ವಿರುದ್ಧ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಮುಂದಿನ ದಿನಗಳಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡುವುದಾಗಿ ಸಂಬAಧಿಸಿದವರು ಭರವಸೆ ನೀಡಿದರು.

ಅಧಿಕಾರಿಗಳ ಗೈರಿಗೆ ಆಕ್ರೋಶ

ಮೂರು ವರ್ಷಗಳಿಂದ ನಡೆಯದ ಗ್ರಾಮ ಸಭೆಯು ಈಗ ನಡೆಯುತ್ತಿದ್ದರೂ ಸಂಬAಧಪಟ್ಟ ಅಧಿಕಾರಿಗಳು ಗೈರಾಗಿರುವುದು ಸರಿಯಲ್ಲ ಎಂದು ಒ.ಎಂ. ಮುಸ್ತಫಾ ಅಧ್ಯಕ್ಷರನ್ನು ತರಾಟೆಗೆ ತೆಗೆದು ಕೊಂಡರು. ಗ್ರಾಮೀಣ ಮಟ್ಟದಲ್ಲಿ ಹೆಚ್ಚಿನದಾಗಿ ಕಂದಾಯ ಇಲಾಖೆಗೆ ಸಂಬAಧಿಸಿದ ಸಮಸ್ಯೆಗಳೇ ಹೆಚ್ಚಾಗಿರುತ್ತಿದ್ದು ಗ್ರಾಮಸ್ಥರ ಸಮಸ್ಯೆ ಆಲಿಸ ಬೇಕಾದ ಕಂದಾಯ ಇಲಾಖೆಯ ಅಧಿಕಾರಿಗಳೇ ಗೈರಾಗಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾ.ಪಂ. ಅಧ್ಯಕ್ಷ ಎ ಕೆ ಹಕೀಂ ಮಾತನಾಡಿ ನೆಲ್ಯಹುದಿಕೇರಿ ಗ್ರಾಮದಲ್ಲಿ ಗಾಂಜಾ, ಎಂಡಿಎA ಸೇರಿದಂತೆ ಇನ್ನಿತರ ಮಾದಕ ವಸ್ತುಗಳನ್ನು ಯುವಕರು ಬಳಸುತ್ತಿದ್ದು, ಯುವಕರು ಮಾದಕ ವ್ಯಸನಿಗಳಾ ಗುತ್ತಿದ್ದಾರೆ ಎಂದು ಆರೋಪಿಸಿದರು. ಕೂಡಲೇ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುವ ಮೂಲಕ ಮಾದಕ ವಸ್ತುಗಳನ್ನು ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.

ಕ್ರಮಕ್ಕೆ ಒತ್ತಾಯ: ಗ್ರಾಮದ ಬಹುತೇಕ ಕಾಂಕ್ರೀಟ್ ರಸ್ತೆ ಕಾಮಗಾರಿ ಕಳಪೆಯಾಗಿದ್ದು, ಇತ್ತೀಚಿಗೆ ಕಾಮಗಾರಿ ಪೂರ್ಣಗೊಂಡ ನಾಲ್ಕನೇ ವಾರ್ಡಿನ ನೂತನ ಕಾಂಕ್ರೀಟ್ ರಸ್ತೆಯು ಕಿತ್ತು ಹೋಗಿದೆ. ಕಾಮಗಾರಿ ಮಾಡಿದ ಇಂಜಿನಿಯರ್‌ರÀನ್ನು ಕಪ್ಪು ಪಟ್ಟಿಗೆ ಸೇರಿಸಬೇಕೆಂದು ಉದಯ ಒತ್ತಾಯಿಸಿದರು.

ಸರಕಾರಿ ಶಾಲೆಯ ರಕ್ಷಣೆಗೆ ಮನವಿ

ಎಂ.ಜಿ. ಕಾಲೋನಿಯಲ್ಲಿರುವ ಸರಕಾರಿ ಶಾಲೆಯ ಕಟ್ಟಡವು ಕುಸಿಯುವ ಹಂತಕ್ಕೆ ತಲುಪಿದ್ದು ಮಕ್ಕಳು, ಶಿಕ್ಷಕರು ಭಯದಿಂದಲೇ ಶಾಲೆಗೆ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮುಖ್ಯೋಪಾಧ್ಯಾಯಿನಿ ಮೀನಾಕ್ಷಿ ಸಭೆಯಲ್ಲಿ ಅಳಲು ತೋಡಿಕೊಂಡರು. ಅಲ್ಲದೆ ಸ್ಥಳೀಯ ಮಕ್ಕಳು ಶಾಲಾ ಆವರಣದಲ್ಲಿ ಆಟವಾಡುವ ನೆಪದಲ್ಲಿ ಶಾಲಾ ಕಟ್ಟಡಕ್ಕೆ ಹಾಗೂ ಆವರಣದಲಿ ್ಲರುವ ಹೂವಿನ ಗಿಡಗಳಿಗೆ ಹಾನಿ ಮಾಡುತ್ತಿದ್ದು ಪೊಲೀಸರು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ವಿಳಂಬಕ್ಕೆ ಆಕ್ರೋಶ : ೨೦೧೯ರ ಪ್ರವಾಹದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಸರಕಾರ ಗುರುತಿಸಿದ ಜಾಗದಲ್ಲಿ ಯಾವುದೇ ಕಾಮಗಾರಿ ನಡೆಸದೇ ಸಂತ್ರಸ್ತರಿಗೆ ಅನ್ಯಾಯ ಮಾಡಿದ್ದಾರೆ ಎಂದು ಗ್ರಾಮಸ್ಥ ಕೆ.ಎಂ.ಎಸ್ ಶಿಹಾಬ್ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಬಾಡಿಗೆ ಹಣವನ್ನೂ ನೀಡದೆ ಸತಾಯಿ ಸುತ್ತಿದ್ದಾರೆ ಎಂದು ಆರೋಪಿಸಿದರು.

ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರು ಬೂಸ್ಟರ್ ಲಸಿಕೆ ಪಡೆದುಕೊಳ್ಳಬೇಕೆಂದು ಆರೋಗ್ಯ ಶಿಕ್ಷಣ ಅಧಿಕಾರಿ ಶಾಂತಿ ಮನವಿ ಮಾಡಿದರು. ಅಲ್ಲದೆ ಗ್ರಾಮ ದವರ ಅನುಕೂಲಕ್ಕಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಚಿತ ಶುಗರ್ ಹಾಗೂ ಬಿಪಿ ಪರೀಕ್ಷೆ ಸೇವೆ ಇದ್ದು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ಮಾಡಿದರು. ಇದೇ ಸಂದರ್ಭದಲ್ಲಿ ನೆಲ್ಯಹುದಿಕೇರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರನ್ನು ನೇಮಿಸುವಂತೆ ಒತ್ತಾಯಿಸಿದರು. ಗ್ರಾಮದಲ್ಲಿ ವಯಸ್ಕರು ಹದಿಹರೆಯದವರು ಗಾಂಜಾ ವ್ಯಸನಿಗಳಾಗಿದ್ದು ಪೊಲೀಸ್ ಇಲಾಖೆ ಕಟ್ಟು ನಿಟ್ಟಿನ ಕ್ರಮಕೈಗೊಳ್ಳು ವಂತೆ ಒತ್ತಾಯಿಸಿದರು.

ಕಾಡಾನೆ ಹಾವಳಿ ಹಾಗೂ ವಿದ್ಯುತ್ ಇಲಾಖೆಯ ಸಮಸ್ಯೆ, ರಸ್ತೆ ಸೇರಿದಂತೆ ಅನೇಕ ಸಮಸ್ಯೆಗಳ ಕುರಿತು ಆರೋಪಗಳೇ ಹೆಚ್ಚಾಗಿತ್ತು. ಒಟ್ಟಿನಲ್ಲಿ ಮೂರು ವರ್ಷಗಳಿಂದ ನಡೆಯದ ಗ್ರಾಮ ಸಭೆಯು ಎಂದಿನAತೆ ಆರೋಪ ಪ್ರತ್ಯಾರೋಪದಲ್ಲೇ ಪೂರ್ಣ ಗೊಂಡಿತ್ತು. ಸಭೆಯಲ್ಲಿ ನೋಡಲ್ ಅಧಿಕಾರಿ ಅನಿಲ್, ಪಿಡಿಓ ಅನಿಲ್ ಕುಮಾರ್, ಉಪಾಧ್ಯಕ್ಷೆ ದಮಯಂತಿ, ಗ್ರಾ.ಪಂ. ಸದಸ್ಯರುಗಳು, ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.