ಚೆಟ್ಟಳ್ಳಿ, ಸೆ. ೨೦: ಹಿಂದೂ ಮಲಯಾಳಿ ಸಮಾಜ ಚೆನ್ನಯ್ಯನ ಕೋಟೆ ಸಮಿತಿ ವತಿಯಿಂದ ಓಣಂ ಆಚರಣೆ ವಿಜೃಂಭಣೆಯಿAದ ನಡೆಯಿತು. ಚೆನ್ನಯ್ಯನಕೋಟೆ ಅಯ್ಯಪ್ಪ ದೇವಸ್ಥಾನದಿಂದ ಮಹಾಬಲಿ ವೇಷಧಾರಿ, ಚೆಂಡೆ ವಾದ್ಯಗಳೊಂದಿಗೆ ಕೇರಳ ಶೈಲಿಯ ಉಡುಪುಗಳನ್ನು ಧರಿಸಿ ಸಮಾಜದ ನೂರಾರು ಮಂದಿ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಚೆನ್ನಯ್ಯನಕೋಟೆ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮವನ್ನು ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಹಾಗೂ ಹಿರಿಯ ವಕೀಲ ಎ.ಎಸ್. ಪೊನ್ನಣ್ಣ ಉದ್ಘಾಟಿಸಿದರು. ಓಣಂ ಹಬ್ಬದ ಪ್ರಯುಕ್ತ ಸಾರ್ವಜನಿಕರಿಗೆ ಕ್ರೀಡೆ ಸ್ಪರ್ಧೆಗಳು ನಡೆಯಿತು. ಸಾರ್ವಜನಿಕರ ಪುರುಷರ ಹಗ್ಗಜಗ್ಗಾಟದಲ್ಲಿ ಕಾರ್ಗಿಲ್ ಬಾಯ್ಸ್ ಸಿದ್ದಾಪುರ ಪ್ರಥಮ ಹಾಗೂ ಸಾಗರ್ ಫ್ರೆಂಡ್ಸ್ ಚೆನ್ನಯ್ಯನಕೋಟೆ ದ್ವಿತೀಯ ಸ್ಥಾನ ಪಡೆಯಿತು.
ಮಹಿಳೆಯರ ಹಗ್ಗಜಗ್ಗಾಟದಲ್ಲಿ ವೀಣಾ ಫ್ರೆಂಡ್ಸ್ ಪ್ರಥಮ ಹಾಗೂ ಲಕ್ಕಿ ಫ್ರೆಂಡ್ಸ್ ದ್ವಿತೀಯ ಸ್ಥಾನ ಪಡೆಯಿತು. ಮಡಿಕೆ ಹೊಡೆಯುವುದು, ಸಂಗೀತ ಕುರ್ಚಿ, ಪಾಸಿಂಗ್ ಬಾಲ್, ಮಕ್ಕಳಿಗೆ ಮಿಠಾಯಿ ಹೆಕ್ಕುವುದು, ಭಾರದ ಗುಂಡು ಎಸೆತ ಸ್ಪರ್ಧೆಗಳು ನಡೆಯಿತು. ಸುಮಾರು ೨೧ಕ್ಕೂ ಹೆಚ್ಚು ಬಗೆಯ ವಿವಿಧ ರೀತಿಯ ಖಾದ್ಯಗಳನ್ನೊಳ ಗೊಂಡ ಓಣಂ ಸದ್ಯ ವಿಶೇಷ ಭೋಜನ ವಿತರಣೆ ನಡೆಯಿತು. ಸಮಾಜದ ವತಿಯಿಂದ ಹಿಂದೂ ಮಲಯಾಳಿ ಸಮಾಜದ ಪ್ರಧಾನ ಕಾರ್ಯದರ್ಶಿ ಪಿ.ಕೆ. ಶಶಿಕುಮಾರ್, ಚೆಂಡೆ ಶಾಜಿ ಹಾಗೂ ಚೆಸ್ಕಾಮ್ ಲೈನ್ ಮ್ಯಾನ್ ಶ್ರೀಧರ್ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಸಮಿತಿಯ ಪರವಾಗಿ ೧೦ನೇ ತರಗತಿ ಹಾಗೂ ೧೨ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿ ಗಳಾದ ಶರಣ್ಯ ಹಾಗೂ ಮೇಘ ಅವರಿಗೆ ಧನಸಹಾಯ ನೀಡಲಾಯಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಚೆನ್ನಯ್ಯನಕೋಟೆ ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷ ಕೆ. ಮಧುಸೂದನ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ, ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಬಿ. ಗಣೇಶ್, ಜಿಲ್ಲಾ ಹಿಂದೂ ಮಲಯಾಳಿ ಸಮಾಜದ ಪ್ರಧಾನ ಕಾರ್ಯದರ್ಶಿ ಪಿ.P.ೆ ಶಶಿಕುಮಾರ್, ಸಲಹೆಗಾರ ಕೆ. ಶರತ್ ಕಾಂತ್, ಸುಂಟಿಕೊಪ್ಪ ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷ ಸಂತೋಷ್ ಕುಮಾರ್, ಗೋಣಿಕೊಪ್ಪ ಸಮಾಜದ ಕಾರ್ಯದರ್ಶಿ ಅರುಣ ಕುಮಾರ್, ಉಪಾಧ್ಯಕ್ಷ ಸುಬ್ರಮಣಿ, ಎಸ್.ಎನ್.ಡಿ.ಪಿ. ಜಿಲ್ಲಾಧ್ಯಕ್ಷ ವಿ.ಕೆ. ಲೋಕೇಶ್, ತಾ.ಪಂ. ಮಾಜಿ ಸದಸ್ಯ ಅಜಿತ್ ಕರುಂಬಯ್ಯ ಇದ್ದರು. ಸಮಾ ಜದ ಬಾಂಧವರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.