ವೀರಾಜಪೇಟೆ, ಸೆ. ೨೦: ವೀರಾಜಪೇಟೆ ಪಟ್ಟಣ ಸಹಕಾರ ಬ್ಯಾಂಕ್ ಲಾಭದಲ್ಲಿದ್ದು ಎಲ್ಲಾ ಸದಸ್ಯರುಗಳು ಬ್ಯಾಂಕಿನೊAದಿಗೆ ಉತ್ತಮ ರೀತಿಯಲ್ಲಿ ವ್ಯವಹಾರ ನಡೆಸಿದರೆ ಬ್ಯಾಂಕ್ ಉನ್ನತ ಪ್ರಗತಿ ಹೊಂದಲು ಸಾಧ್ಯ. ಬ್ಯಾಂಕ್ ನೂರು ವರ್ಷಗಳನ್ನು ಪೂರೈಸಿದ್ದು ಶತಮಾನೋತ್ಸವ ಆಚರಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ವೀರಾಜ ಪೇಟೆ ಪಟ್ಟಣ ಸಹಕಾರ ಬ್ಯಾಂಕ್‌ನ ಅಧ್ಯಕ್ಷ ಕರ್ನಂಡ ಸೋಮಯ್ಯ ಹೇಳಿದರು. ಬ್ಯಾಂಕ್‌ನ ಸಭಾಂಗಣ ದಲ್ಲಿ ನಡೆದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬ್ಯಾಂಕಿನಲ್ಲಿ ಒಟ್ಟು ೪೩೯೦ ಸದಸ್ಯರಿದ್ದಾರೆ. ೨,೧೮,೭೫,೫೩೦ ಪಾಲು ಬಂಡವಾಳ ಇದೆ. ಬ್ಯಾಂಕಿನ ಒಟ್ಟು ಠೇವಣೆ ರೂ. ೫೬,೨೯,೬೦,೦೧೮ ಇದೆ. ವರದಿ ಸಾಲಿನಲ್ಲಿ ೨೩,೬೨,೧೫,೩೫೦ ಸಲ ವಿತರಿಸಲಾಗಿದೆ. ೨೦,೮೨,೬೦,೦೧೮ ಸಾಲ ವಸೂಲಿ ಮಾಡಲಾಗಿದೆ. ವರ್ಷಾಂತ್ಯಕ್ಕೆ ೨೮,೩೮,೯೧,೩೩೭ ಬಾಕಿ ಇದ್ದು, ಶೇ ೯೦.೦೯ ರಷ್ಟು ಸಾಲ ವಸೂಲಾತಿ ಆಗಿದೆ. ವರದಿ ಸಾಲಿನಲ್ಲಿ ಒಟ್ಟು ೬೩,೮೫,೯೮೧ ರೂ. ಲಾಭವಾಗಿದೆ. ಲೆಕ್ಕ ಪರಿಶೋಧನೆ ಯಲ್ಲಿ ‘ಎ’ ವರ್ಗ ನೀಡಲಾಗಿದೆ ಎಂದು ಹೇಳಿದರು. ವೇದಿಕೆಯಲ್ಲಿ ಉಪಾಧ್ಯಕ್ಷ ಕೆ.ಎಂ ಚರ್ಮಣ, ನಿರ್ದೇಶಕರುಗಳಾದ ಕೆ.ಡ್ಲೂ ಬೋಪಯ್ಯ, ಎಂ.ಎA ನಂಜಪ್ಪ, ಕೆ.ಬಿ ಪ್ರತಾಪ್, ಪಿ.ಎಂ ರಚನ್, ಎಂ.ಪಿ. ಕಾವೇರಪ್ಪ, ಎಂ.ಎನ್. ಪೂಣಚ್ಚ, ವಿ.ಪಿ. ರಮೇಶ್, ಎಂ.ಕೆ. ದೇವಯ್ಯ, ಪಿ.ಕೆ. ಅಬ್ದುಲ್‌ರೆಹಮಾನ್, ಹೆಚ್.ಸಿ ಮುತ್ತಮ್ಮ, ಎಸ್.ಬಿ. ಜುಬಿನಾ, ಐ.ಎಂ. ಕಾವೇರಮ್ಮ ವ್ಯವಸ್ಥಾಪಕ ಸಿ.ಎಸ್ ಪ್ರಕಾಶ್ ಉಪಸ್ಥಿತರಿದ್ದರು.