ಪೊನ್ನಂಪೇಟೆ, ಸೆ. ೨೦: ಹಿರಿಯ ಕರಾಟೆ ಪಟು ಚೆಪ್ಪುಡೀರ ಎಸ್. ಅರುಣ್ ಮಾಚಯ್ಯ ಅವರು ಕಳೆದ ಐದು ದಶಕಗಳಿಂದ ಕರಾಟೆ ಕ್ಷೇತ್ರದಲ್ಲಿ ಮಾಡಿದ ಸಾಧನೆ ಅಪೂರ್ವವಾದದ್ದು. ಇದು ಮುಂದಿನ ಪೀಳಿಗೆಗೆ ಪ್ರೇರಕವಾಗಲು ಅರುಣ್ ಮಾಚಯ್ಯ ಅವರ ಸಾಧನೆ ಪುಸ್ತಕ ರೂಪದಲ್ಲಿ ದಾಖಲಾಗುವ ಅಗತ್ಯವಿದೆ ಎಂದು ಲಯನ್ಸ್ ಸಂಸ್ಥೆಯ ಮಾಜಿ ರಾಜ್ಯಪಾಲರೂ ಆಗಿರುವ ಚೆಪ್ಪುಡೀರ ಕುಟುಂಬಸ್ಥರ ಸಂಘದ ಅಧ್ಯಕ್ಷ ಸಿ.ಎಂ. ಶುಭಾಷ್ ಮುತ್ತಣ್ಣ ಅಭಿಪ್ರಾಯಪಟ್ಟರು.
ಲಂಡನಿನ ಬರ್ಮಿಂಗ್ ಹ್ಯಾಮ್‌ನಲ್ಲಿ ಇತ್ತೀಚಿಗೆ ಮುಕ್ತಾಯ ಗೊಂಡ ಕಾಮನ್ವೆಲ್ತ್ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಅರುಣ್ ಮಾಚಯ್ಯ ಅವರು ಭಾರತ ತಂಡದ ನಾಯಕತ್ವ ವಹಿಸಿ ಪಾಲ್ಗೊಂಡು ದೇಶಕ್ಕೆ ಒಟ್ಟು ೨೫ ಪದಕ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಿನ್ನೆಲೆಯಲ್ಲಿ ಚೆಪ್ಪುಡೀರ ಕುಟುಂಬಸ್ಥರ ಸಂಘದ ವತಿಯಿಂದ ಅವರ ನಿವಾಸದಲ್ಲಿ ಆಯೋಜಿಸ ಲಾಗಿದ್ದ ಕಾರ್ಯಕ್ರಮದಲ್ಲಿ ಅರುಣ್ ಮಾಚಯ್ಯ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ಕಾಮನ್ವೆಲ್ತ್ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ದೇಶದ ಕೀರ್ತಿ ಹೆಚ್ಚಿಸಿದ್ದು ಅರುಣ್ ಮಾಚಯ್ಯ ಅವರ ದಿಟ್ಟ ನೇತೃತ್ವಕ್ಕೆ ಸಂದ ಗೌರವವಾಗಿದೆ ಎಂದರು.
ಚೆಪ್ಪುಡೀರ ಕುಟುಂಬಸ್ಥರ ಸಂಘದ ಪ್ರಮುಖ, ಖ್ಯಾತ ಹಾಕಿ ವೀಕ್ಷಕ ವಿವರಣೆಗಾರರಾದ ಸಿ.ಎ. ಕಾರ್ಯಪ್ಪ ಮಾತನಾಡಿ ಅರುಣ್ ಮಾಚಯ್ಯ ಅವರ ನಾಯಕತ್ವದ ಭಾರತ ತಂಡ ಕಾಮನ್ವೆಲ್ತ್ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಒಟ್ಟು ೨೫ ಪದಕ ಪಡೆದಿರುವುದು ಇಡೀ ದೇಶ ಹೆಮ್ಮೆಪಡುವ ವಿಚಾರವಾಗಿದೆ ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅರುಣ್ ಮಾಚಯ್ಯ, ಇಡೀ ವಿಶ್ವದಲ್ಲೇ ಅತಿ ದೊಡ್ಡ ಪಂದ್ಯಾವಳಿ ಯಾದ ವಿಶ್ವ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಭಾರತ ತಂಡ ಪಾಲ್ಗೊಂಡು ಅದ್ವಿತೀಯ ಸಾಧನೆ ಮಾಡುವುದೇ ಮುಂದಿನ ನನ್ನ ಹೆಗ್ಗುರಿಯಾಗಿದೆ. ನೋಂದಾಯಿ ಸಲ್ಪಟ್ಟ ಒಟ್ಟು ೨೪೦ ದೇಶಗಳು ಭಾಗವಹಿಸುವ ವಿಶ್ವ ಕರಾಟೆ ಚಾಂಪಿಯನ್ ಶಿಪ್‌ಗಾಗಿ ಭಾರತ ತಂಡವನ್ನು ಮತ್ತಷ್ಟು ಪರಿಣಾಮ ಕಾರಿಯಾಗಿ ಸಜ್ಜುಗೊಳಿಸಲಾಗುತ್ತಿದೆ. ಈ ಕುರಿತ ತಯಾರಿ ಈಗಾಗಲೇ ಆರಂಭಗೊAಡಿದೆ. ಅಲ್ಲದೇ, ಮುಂದಿನ ತಿಂಗಳು ಗುಜರಾತಿನಲ್ಲಿ ನಡೆಯುವ ನ್ಯಾಷನಲ್ ಗೇಮ್ಸ್ ಗಾಗಿ ಕರ್ನಾಟಕ ರಾಜ್ಯ ಕರಾಟೆ ತಂಡವನ್ನು ಸಿದ್ಧಗೊಳಿಸಲಾಗುತ್ತಿದೆ. ತಮ್ಮ ನೇತೃತ್ವದಲ್ಲಿ ರಾಜ್ಯ ತಂಡ ನ್ಯಾಷನಲ್ ಗೇಮ್ಸ್ ನಲ್ಲಿ ಪಾಲ್ಗೊಳ್ಳಲಿದೆ ಎಂದು ತಿಳಿಸಿದರು.
ಹಿರಿಯ ಸಹಕಾರಿ ಧುರೀಣ ರಾದ ಚೆಪ್ಪುಡೀರ ಸೋಮಯ್ಯ ಮಾತ ನಾಡಿ, ಚೆಪ್ಪುಡೀರ ಕುಟುಂಬಕ್ಕೆ ತನ್ನದೇ ಆದ ಇತಿಹಾಸವಿದೆ. ಧೀರ ವ್ಯಕ್ತಿತ್ವದ ದಿವಾನ್ ಪೊನ್ನಪ್ಪ ಅವರ ಮನೆತನದಲ್ಲಿ ಹುಟ್ಟಿದ ಅರುಣ್ ಮಾಚಯ್ಯ ಅವರ ಸಾಧನೆಯನ್ನು ದೇಶದ ಕ್ರೀಡಾ ಇತಿಹಾಸದಿಂದ ಹೊರತುಪಡಿಸಲು ಎಂದಿಗೂ ಸಾಧ್ಯವಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಚೆಪ್ಪುಡೀರ ಕುಟುಂಬಸ್ಥರ ಸಂಘದ ಕಾರ್ಯದರ್ಶಿ ಸಿ.ಎಂ. ರಾಮಕೃಷ್ಣ, ಪದಾಧಿಕಾರಿಗಳಾದ ರಾಕೇಶ್ ದೇವಯ್ಯ, ಸಿ.ಪಿ. ಬೋಪಣ್ಣ, ಸಿ.ಎ. ಪ್ರದೀಪ್ ಪೂವಯ್ಯ, ಮಾದಯ್ಯ ಸಿ.ಎ. ಮಾಚಯ್ಯ (ಮಾಚು), ಸಿ.ಎ. ಸುಬಿನ್ ಸುಬ್ಬಯ್ಯ ಮೊದಲಾದವರಿದ್ದರು.