ಕುಶಾಲನಗರ, ಸೆ. ೧೯: ಮುಳ್ಳುಸೋಗೆ ಕಂದಾಯ ಗ್ರಾಮ ಪುರಸಭೆ ವ್ಯಾಪ್ತಿಗೆ ಬಂದಲ್ಲಿ ಹೆಚ್ಚಿನ ಅಭಿವೃದ್ಧಿ ಸಾಧ್ಯ ಎಂದು ಮಡಿಕೇರಿ ಕ್ಷೇತ್ರ ಶಾಸಕ ರಂಜನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅವರು ಕುಶಾಲನಗರದಲ್ಲಿ ಪಟ್ಟಣ, ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಮತ್ತು ಮಾದಾಪಟ್ಟಣ ವ್ಯಾಪ್ತಿಯ ಜನಪ್ರತಿನಿಧಿಗಳು, ಸಂಘ-ಸAಸ್ಥೆಗಳು ಮತ್ತು ನಾಗರಿಕರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಕುಶಾಲನಗರ ಪಟ್ಟಣ ಪಂಚಾಯಿತಿ ಶೀಘ್ರದಲ್ಲಿ ಮೇಲ್ದರ್ಜೆಗೇರಿ ಪುರಸಭೆಯಾಗಿ ಆದೇಶ ಬರಲಿದ್ದು, ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಸದಸ್ಯರ ತಕರಾರು ಆಕ್ಷೇಪಣೆಯಿಂದ ವಿಳಂಬಗೊAಡಿದೆ. ಕುಶಾಲನಗರ ಪುರಸಭೆಯಾಗಲು ಸರ್ಕಾರದಿಂದ ನೋಟಿಫಿಕೇಶನ್ ಹೊರಡಿಸಲಾಗಿದ್ದು, ಕೆಲವೇ ಸಮಯದಲ್ಲಿ ಪುರಸಭೆಯಾಗಿ ಮೇಲ್ದರ್ಜೆಗೆ ಏರುವ ಬಗ್ಗೆ ಮಾಹಿತಿ ನೀಡಿದ ಶಾಸಕರು, ಈ ಸಂದರ್ಭ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ಸದಸ್ಯತ್ವ ರದ್ದಾಗುವ ಬಗ್ಗೆ ಆತಂಕ ದಿಂದ ಹೊರಬರಬೇಕು. ಗ್ರಾಮ, ಪಟ್ಟಣದ ಅಭಿವೃದ್ಧಿ ಮುಖ್ಯವೇ ಹೊರತು, ಸ್ವಾರ್ಥವನ್ನು ಪರಿಗಣಿಸಬೇಡಿ ಎಂದರು. ಆಕ್ಷೇಪಣೆ ಸಲ್ಲಿಸಿ ವಕೀಲರ ಮೂಲಕ ನೀಡಿದ ತಕರಾರು ಅರ್ಜಿಗಳನ್ನು ತಕ್ಷಣ ಹಿಂಪಡೆಯುವAತೆ ಶಾಸಕರು ಸಲಹೆ ನೀಡಿದರು.
ಪುರಸಭೆ ಆದ ಸಂದರ್ಭದಲ್ಲಿ ನ್ಯಾಯಯುತವಾಗಿ ವಾರ್ಡುವಾರು ಸದಸ್ಯರ ನಾಮನಿರ್ದೇಶನ ಮಾಡುವ ಬಗ್ಗೆ ರಂಜನ್ ಸದಸ್ಯರಿಗೆ ಭರವಸೆ ವ್ಯಕ್ತಪಡಿಸಿದರು. ಸಭೆಯಲ್ಲಿ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತಿನಿಧಿಗಳು, ಕುಶಾಲನಗರ ಪಟ್ಟಣ ಪಂಚಾಯಿತಿ ಸದಸ್ಯರು ಮತ್ತು ಸಂಘ ಸಂಸ್ಥೆಗಳ ಪ್ರಮುಖರು, ಸಾರ್ವಜನಿಕರು ಸಭೆಯಲ್ಲಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಈ ಸಂದರ್ಭ ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಜಯವರ್ಧನ್, ಉಪಾಧ್ಯಕ್ಷರಾದ ಸುರಯ್ಯ ಬಾನು, ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಆರ್ ಜಯಮ್ಮ, ಕುಶಾಲನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಂ ಎಂ ಚರಣ್ ಮತ್ತಿತರರು ಇದ್ದರು.