ಚೆಟ್ಟಳ್ಳಿ, ಸೆ. ೧೯: ತಾ. ೨೩ರಂದು ಪೂರ್ವಾಹ್ನ ೯ ರಿಂದ ಮಧ್ಯಾಹ್ನ ೧ ರವರೆಗೆ ಚೆಟ್ಟಳ್ಳಿ ಪಶು ವೈದ್ಯ ಆಸ್ಪತ್ರೆ ಆಶ್ರಯದಲ್ಲಿ ಸಾಕು ನಾಯಿಗಳಿಗೆ ಹಾಗೂ ಬೆಕ್ಕಿಗೆ ಉಚಿತ ರೇಬಿಸ್ ಲಸಿಕೆ ನೀಡಲಾಗುತ್ತÀದೆ.
ಚೇರಳ, ಶ್ರೀಮಂಗಲ, ಈರಳೆವಳಮುಡಿ ಹಾಗೂ ಕೂಡ್ಲೂರು, ಚೆಟ್ಟಳ್ಳಿ ವ್ಯಾಪ್ತಿಗೆ ಒಳ ಪಡುವ ಸಾಕುನಾಯಿ ಬೆಕ್ಕುಗಳಿಗೆ ಉಚಿತ ರೇಬಿಸ್ ಲಸಿಕೆ ನೀಡಲಾಗುವುದೆಂದು ಕೇಂದ್ರದ ಮುಖ್ಯ ಪಶುವೈದ್ಯಾಧಿಕಾರಿ ಡಾ.ಸಂಜೀವ ಕುಮಾರ್ ಆರ್. ಸಿಂಧೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.