ಕೊಡ್ಲಿಪೇಟೆ/ಸೋಮವಾರಪೇಟೆ, ಸೆ. ೧೯: ಡಾ. ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ಲಕ್ಷ ಬಿಲ್ವಾರ್ಚನೆ ಪ್ರಚಾರ ರಥಕ್ಕೆ ಕೊಡ್ಲಿಪೇಟೆಯಲ್ಲಿ ಚಾಲನೆ ನೀಡಲಾಯಿತು.

ವೀರಶೈವ ಲಿಂಗಾಯತ ಮಹಾ ವೇದಿಕೆ ವತಿಯಿಂದ ಕಾಯಕಯೋಗಿ, ಕರ್ನಾಟಕ ರತ್ನ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆ ತೃತೀಯ ವರ್ಷದ ಲಕ್ಷ ಬಿಲ್ವಾರ್ಚನೆ ಕಾರ್ಯಕ್ರಮದ ಅಂಗವಾಗಿ ಕೊಡಗು ಜಿಲ್ಲೆಯಲ್ಲಿ ಪ್ರಚಾರ ರಥಕ್ಕೆ ಕೊಡ್ಲಿಪೇಟೆಯಲ್ಲಿ ಕಿರಿಕೊಡ್ಲಿ ಮಠಾಧೀಶ ಶ್ರೀ ಸದಾಶಿವ ಸ್ವಾಮೀಜಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಕೊಡಗಿನವರೇ ಆದ ಪ್ರಶಾಂತ್ ಕಲ್ಲೂರು ತಮ್ಮ ವೀರಶೈವ ಲಿಂಗಾಯತ ಮಹಾ ವೇದಿಕೆಯ ಮೂಲಕ ಪ್ರತಿವರ್ಷ ಪೂಜ್ಯರ ಗದ್ದುಗೆಗೆ ಲಕ್ಷ ಬಿಲ್ವಾರ್ಚನೆ ನಡೆಸಿಕೊಂಡು ಬರುತ್ತಿದ್ದಾರೆ. ಈ ಬಾರಿ ಕಾರ್ಯಕ್ರಮದ ಪ್ರಚಾರಕ್ಕಾಗಿ ಪ್ರಚಾರ ರಥ ರಾಜ್ಯದ ಉದ್ದಗಲಕ್ಕೂ ಸಂಚರಿಸುತ್ತಿದೆ ಎಂದರು.

ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟಿçÃಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಮಾತನಾಡಿ ಶ್ರೀ ಕ್ಷೇತ್ರ ಸಿದ್ದಗಂಗಾ ಮಠ ತುಮಕೂರಿನಲ್ಲಿ ನವೆಂಬರ್ ೨೧ ರಂದು ಬೆಳಿಗ್ಗೆ ೫.೩೦ ರಿಂದ ಲಕ್ಷ ಪುಷ್ಪ ಬಿಲ್ವಾರ್ಚನೆ, ಮಧ್ಯಾಹ್ನ ೧೨.೩೦ಕ್ಕೆ ಮಹಾಮಂಗ ಳಾರತಿ, ಮಧ್ಯಾಹ್ನ ೨.೩೦ ರಿಂದ ಪರಮಪೂಜ್ಯರ ಪುತ್ಥಳಿಯ ಭವ್ಯ ಮೆರವಣಿಗೆ ನಡೆಯಲಿದೆ. ಸಂಜೆ ೬ ಗಂಟೆಯಿAದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ೫ ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಈ ಸಂದರ್ಭ ಪ್ರಮುಖರುಗಳಾದ ಎಸ್.ಕೆ.ವೀರಪ್ಪ, ಯತೀಶ್, ದಿವಾಕರ್, ಪ್ರಸನ್ನ, ಅಶ್ವಥ್, ಶಾಂತಮಲ್ಲಪ್ಪ, ಕಾಂತರಾಜು, ಲೋಕೇಶ್, ಭಾನುಪ್ರಕಾಶ್, ದಯಾನಂದ, ಬಾಬು ರಾಜೇಂದ್ರ ಪ್ರಸಾದ್, ಚಿಕ್ಕವೀರರಾಜು, ದುಷ್ಯಂತ್ ಸೇರಿದಂತೆ ಇತರರು ಹಾಜರಿದ್ದರು.