ಕೂಡಿಗೆ, ಸೆ. ೧೯: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದಲಾಪುರ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಅನೆಕಾಡು ಅತ್ತೂರು ಅರಣ್ಯ ಪ್ರದೇಶದಿಂದ ಬರುವ ಕಾಡಾನೆಗಳ ಹಿಂಡು ಮದಲಾಪುರ ಗ್ರಾಮದಲ್ಲಿ ಹೆಚ್.ಹೆಚ್. ನಾಗರಾಜ್ ಎಂಬುವವರ ಜಮೀನಿಗೆ ದಾಳಿ ಮಾಡಿ ಭತ್ತದ ನಾಟಿ, ಬೆಳೆಗಳನ್ನು ತಿಂದು, ತುಳಿದು ನಾಶಪಡಿಸಿವೆ.
ಹೆಚ್.ಹೆಚ್. ನಾಗರಾಜ್ ಹನುಮಂತಪ್ಪ ಎಂಬುವವರ ಜಮೀನಿನಲ್ಲಿ ಕಳೆದ ವಾರದಲ್ಲಿ ಭತ್ತದ ಗದ್ದೆಗಳನ್ನು ತುಳಿದು ನಷ್ಟಪಡಿಸಿದ್ದು, ಗದ್ದೆಗಳನ್ನು ಮರು ಉಳುಮೆ ಮಾಡಿ ಎರಡು ದಿನಗಳ ಹಿಂದೆ ಭತ್ತದ ನಾಟಿ ಮಾಡಲಾಗಿತ್ತು. ಅದೇ ಜಮೀನಿಗೆ ಬೆಂಡೆಬೆಟ್ಟದ ಮೂಲಕ ಹಾರಂಗಿ ನದಿಯನ್ನು ದಾಟಿ ಮದಲಾಪುರ ವ್ಯಾಪ್ತಿಯ ಜಮೀನಿಗೆ ನುಗ್ಗಿ ಬೆಳೆಗಳನ್ನು ತಿಂದು ನಾಶಪಡಿಸಿವೆ.
ಅರಣ್ಯ ಇಲಾಖೆಯ ಅಧಿಕಾರಿ ವರ್ಗದವರು ಬೆಂಡೆಬೆಟ್ಟ ಮೀಸಲು ಅರಣ್ಯ ಪ್ರದೇಶದಲ್ಲಿರುವ ಕಾಡಾನೆಗಳನ್ನು ಆನೆಕಾಡು ವ್ಯಾಪ್ತಿಗೆ ಓಡಿಸುವಂತೆ ಈ ವ್ಯಾಪ್ತಿಯ ರೈತರ ಒತ್ತಾಯವಾಗಿದೆ.