ಮಡಿಕೇರಿ, ಸೆ. ೧೯: ಎಂ. ಬಾಡಗ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ ವತಿಯಿಂದ ಜಿಲ್ಲಾ ಮಟ್ಟದ ಗ್ರಾಮಗಳ ನಡುವಿನ ಹಿಂದೂ ಹಾಕಿ ಕಪ್ ನವೆಂಬರ್ ೧೧ ರಿಂದ ನಡೆಯಲಿದೆ ಎಂದು ಕ್ಲಬ್ ಮಾಹಿತಿ ನೀಡಿದೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕ್ಲಬ್ ಅಧ್ಯಕ್ಷ ಕಂಬೀರAಡ ಸತೀಶ್ ಮುತ್ತಪ್ಪ, ನವೆಂಬರ್ ೧೧ ರಿಂದ ೨೫ ರ ತನಕ ಮೂರ್ನಾಡುವಿನ ಲಾಲು ಮುದ್ದಯ್ಯ ಮೈದಾನದಲ್ಲಿ ಹಾಕಿ ಪಂದ್ಯಾವಳಿ ನಡೆಯಲಿದ್ದು, ಗ್ರಾಮಗಳಿಂದ ೨ ತಂಡಗಳು ಭಾಗವಹಿಸಲು ಅವಕಾಶವಿದೆ. ರಾಜ್ಯ, ರಾಷ್ಟç ಹಾಗೂ ಅಂತರರಾಷ್ಟಿçÃಯ ಮಟ್ಟದಲ್ಲಿ ಆಡಿದವರು ಅವರವರ ಗ್ರಾಮದ ತಂಡಗಳನ್ನು ಪ್ರತಿನಿಧಿಸಬಹುದಾಗಿದೆ. ಆಟಗಾರರು ಗ್ರಾ.ಪಂ. ದೃಢೀಕರಣ ಪತ್ರ, ಆಧಾರ್ ಕಾರ್ಡ್ ನೀಡಬೇಕು. ಪಂದ್ಯಾಟವು ನಾಕೌಟ್ ಮಾದರಿಯಲ್ಲಿ ನಡೆಯಲಿದ್ದು, ಜಿಲ್ಲೆಯ ೮೦ ರಿಂದ ೧೦೦ ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ. ಒಬ್ಬ ಆಟಗಾರ ಒಂದು ತಂಡದಲ್ಲಿ ಮಾತ್ರ ಆಡಬೇಕೆಂದು ಮಾಹಿತಿ ನೀಡಿದರು.

ಅಕ್ಟೋಬರ್ ೩೧ ತಂಡಗಳ ಹೆಸರು ನೋಂದವಣಿಗೆ ಕಡೆ ದಿನವಾಗಿದ್ದು, ನಗರಸಭೆ, ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ನಿವಾಸಿಗಳ ತಂಡಗಳಿಗೆ ಆಡಲು ಅವಕಾಶವಿರುವುದಿಲ್ಲ. ಆದರೆ, ಗ್ರಾಮಗಳಲ್ಲಿ ತೋಟ ಹೊಂದಿದವರು ಆ ಗ್ರಾಮದ ತಂಡದಲ್ಲಿ ಆಡಬಹುದಾಗಿದೆ. ಅಂತವರು ಆರ್.ಟಿ.ಸಿ. ಪ್ರತಿಯನ್ನು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ೮೧೦೫೯೧೯೯೪೯, ೯೧೪೮೮೧೧೬೫೯, ೯೬೧೧೫೫೪೦೪೧ ಸಂಖ್ಯೆಯನ್ನು ಸಂಪರ್ಕಿಸಲು ಕೋರಿದ್ದಾರೆ.

ಗೋಷ್ಠಿಯಲ್ಲಿ ಕಾರ್ಯದರ್ಶಿ ಮುಕ್ಕಾಟೀರ ಕ್ಯಾರಿ ಕರುಂಬಯ್ಯ, ಖಜಾಂಜಿ ನುಚ್ಚಮಣಿಯಂಡ ಯಶ್ವಿನ್ ಪೊನ್ನಪ್ಪ, ನಿರ್ದೇಶಕರುಗಳಾದ ಅಪ್ಪಚ್ಚಂಡ ದೇವಯ್ಯ, ಬಾರಿಯಂಡ ಸುಬ್ರಮಣಿ, ಪೋತಂಡ ಲೋಕೇಶ್ ಹಾಜರಿದ್ದರು.