ಮಡಿಕೇರಿ, ಸೆ. ೧೯: ಮಧ್ಯಪ್ರದೇಶದ ಭೂಪಾಲ್‌ನಲ್ಲಿ ನಡೆಯುತ್ತಿರುವ ೧೭ನೇ ನ್ಯಾಷನಲ್ ಯೂತ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್-೨೦೨೨ರಲ್ಲಿ ೮೦೦ ಮೀಟರ್ ಓಟದಲ್ಲಿ ಕರ್ನಾಟಕ ರಾಜ್ಯ ಪ್ರತಿನಿಧಿಸಿದ್ದ ಕೊಡಗಿನ ಯುವಕ ತೇಲಪಂಡ ಬೋಪಣ್ಣ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದಿದ್ದಾರೆ.

೧.೫೬.೧೨ ಸೆಕೆಂಡ್‌ನಲ್ಲಿ ಗುರಿ ತಲುಪಿದ ಬೋಪಣ್ಣ, ಈ ಸಾಧನೆಯೊಂದಿಗೆ ಅಕ್ಟೋಬರ್‌ನಲ್ಲಿ ಕುವೈತ್‌ನಲ್ಲಿ ನಡೆಯಲಿರುವ ಏಷ್ಯನ್ ಯೂತ್ ಅಥ್ಲೆಟಿಕ್ ಚಾಂಪಿಯನ್ ಶಿಪ್‌ಗೆ ಆಯ್ಕೆಯಾಗಿದ್ದಾರೆ.

ಇವರು ಮೂಲತಃ ಹಾಲುಗುಂದದವರಾದ ಡಾ. ತೇಲಪಂಡ ಕಾಳಪ್ಪ ಹಾಗೂ ರಚನಾ (ತಾಮನೆ-ಪೋಡಮಾಡ) ದಂಪತಿಯ ಪುತ್ರ.