ಕುಶಾಲನಗರ, ಸೆ. ೧೯ : ಟ್ಯಾಕ್ಸಿ ಚಾಲಕರು ಸಂಘಟಿತರಾಗುವ ಮೂಲಕ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು ಎಂದು ಕರ್ನಾಟಕ ಟ್ಯಾಕ್ಸಿ ಡ್ರೈವರ್ ಆರ್ಗನೈಸೇಶನ್ ಕೊಡಗು ಜಿಲ್ಲಾಧ್ಯಕ್ಷ ವಿನ್ಸೆಂಟ್ ಬಾಬು ಹೇಳಿದರು.
ಕುಶಾಲನಗರದಲ್ಲಿ ಏರ್ಪಡಿಸಿದ್ದ ಕರ್ನಾಟಕ ಟ್ಯಾಕ್ಸಿ ಡ್ರೈವರ್ ಆರ್ಗನೈಸೇಶನ್ ಕುಶಾಲನಗರ ತಾಲೂಕು ಘಟಕದ ಪ್ರಥಮ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೊಡಗು ಜಿಲ್ಲಾ ಗೌರವಾಧ್ಯಕ್ಷ ಎಂ.ಎ.ಮೊಹಮ್ಮದ್ ರಫೀಕ್ ಮಾತನಾಡಿ, ರಾಜ್ಯದ ೩೧ ಜಿಲ್ಲೆಗಳಲ್ಲಿ ಟ್ಯಾಕ್ಸಿ ಡ್ರೆöÊವರ್ ಆರ್ಗನೈಸೇಶನ್ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಮಾಹಿತಿ ನೀಡಿದರು. ಅತಿಥಿಗಳಾಗಿ ಪಾಲ್ಗೊಂಡಿದ್ದ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ನಿರ್ದೇಶಕ ರಘುಹೆಬ್ಬಾಲೆ ಮಾತನಾಡಿ, ಜಿಲ್ಲೆಗೆ ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರ ಭೇಟಿ ಸಂಖ್ಯೆ ಹೆಚ್ಚಿದ್ದು, ಅವರ ಸುರಕ್ಷತೆಗೆ ಟ್ಯಾಕ್ಸಿ ಚಾಲಕರು ವಿಶೇಷ ಒತ್ತು ನೀಡಬೇಕು. ಅವರೊಂದಿಗೆ ಪ್ರೀತಿಯಿಂದ ಸೌಜನ್ಯದಿಂದ ವರ್ತಿಸಬೇಕು ಎಂದು ಸಲಹೆ ನೀಡಿದರು. ಜಿಲ್ಲಾ ಉಪಾಧ್ಯಕ್ಷ ಕೆ.ಎಂ.ಪರಶುರಾಮ, ತಾಲ್ಲೂಕು ಅಧ್ಯಕ್ಷ ಕೆ.ಎಸ್.ಶಿವು, ಜಿಲ್ಲಾ ಉಪಾಧ್ಯಕ್ಷ ಡೆನ್ನೀಸ್, ಪ್ರಧಾನ ಕಾರ್ಯದರ್ಶಿ ಎಚ್.ಎನ್.ಕಿರಣ್, ಎ.ಸಿ.ಲೋಕೇಶ್, ಕೆ.ಎನ್. ಮಂಜುನಾಥ್, ಎಂ.ಆರ್.ಪ್ರಕಾಶ್, ಉಪಾಧ್ಯಕ್ಷ ಸುನೀಲ್ ಕುಮಾರ್, ಕಾರ್ಯದರ್ಶಿ ಡಿ.ಟಿ.ಗೋವಿಂದ, ಸಹ ಕಾರ್ಯದರ್ಶಿ ಮಿಲನ್ ನಾಣಯ್ಯ, ಕೋಶಾಧಿಕಾರಿ ಸಿ.ಆರ್. ಶ್ರೀನಿವಾಸ್, ಸೋಮವಾರಪೇಟೆ ಘಟಕದ ಅಧ್ಯಕ್ಷ ಬಿ.ವಿ. ರವಿ, ಕಾರ್ಯದರ್ಶಿ ಕೆ.ಆರ್. ಮಂಜುನಾಥ್ ಮತ್ತಿತರರು ಇದ್ದರು. ಇದೇ ಸಂದರ್ಭ ಹಿರಿಯ ಟ್ಯಾಕ್ಸಿ ಚಾಲಕರಾದ ಫರ್ನಾಂಡೀಸ್, ಪಿರಿಯಾಪಟ್ಟಣ ಕೃಷ್ಣ, ಸಂತು ಕಾರ್ಯಪ್ಪ ಅವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.