ಮಡಿಕೇರಿ, ಸೆ. ೧೮: ಮಡಿಕೇರಿ ದಸರಾದ ಪ್ರಮುಖ ಆಕರ್ಷಣೆ ಗಳಲ್ಲೊಂದಾದ ಮಕ್ಕಳ ದಸರಾವನ್ನು ಈ ವರ್ಷವೂ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆಯೋಜಿಸಲಾಗಿದೆ ಎಂದು ಮಕ್ಕಳ ದಸರಾ ಸಂಚಾಲಕ ಅನಿಲ್ ಎಚ್.ಟಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅ. ೩ ರಂದು ಮಡಿಕೇರಿಯ ಗಾಂಧಿ ಮೈದಾನದಲ್ಲಿ ಬೆಳಿಗ್ಗೆ ೯.೩೦ ಗಂಟೆಯಿAದ ಮಕ್ಕಳಿಗಾಗಿ ವೈವಿಧ್ಯಮಯ ಸ್ಪರ್ಧೆಗಳನ್ನು ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಸಾದ್ ಗೌಡ, ಕಾರ್ಯದರ್ಶಿ ಪ್ರಮೋದ್ ಕುಮಾರ್ ರೈ ನೇತೃತ್ವದಲ್ಲಿ ಆಯೋಜಿಸಲಾಗಿದೆ.
ಮಕ್ಕಳ ಸಂತೆ, ಮಕ್ಕಳ ಮಂಟಪ, ಕ್ಲೇ ಮಾಡೆಲಿಂಗ್, ಛದ್ಮವೇಷ ಸ್ಪರ್ಧೆಗಳನ್ನು ಈ ಬಾರಿ ಮಿಸ್ಟಿ ಹಿಲ್ಸ್ ವತಿಯಿಂದ ಆಯೋಜಿಸಲಾಗಿದೆ.
ಮಕ್ಕಳ ಸಂತೆ: ವಿದ್ಯಾರ್ಥಿಗಳಿಗಾಗಿ ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಮಕ್ಕಳ ಸಂತೆಗೆ ಅಗತ್ಯವಿರುವ ಪರಿಕರಗಳನ್ನು ವಿದ್ಯಾರ್ಥಿಗಳೇ ತರಬೇಕು. ತಂಡದಲ್ಲಿ ಗರಿಷ್ಠ ೪ ಮಕ್ಕಳಿಗೆ ಮಾತ್ರ ಅವಕಾಶ.
ಮಕ್ಕಳಿಂದ ಅಂಗಡಿ ಸ್ಪರ್ಧೆ: ವಿದ್ಯಾರ್ಥಿಗಳಿಗಾಗಿ ಮಕ್ಕಳ ಅಂಗಡಿ ಸ್ಪರ್ಧೆ ಆಯೋಜಿಸಲಾಗಿದ್ದು ಒಂದು ತಂಡದಲ್ಲಿ ೪ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ.
ಮಕ್ಕಳ ಮಂಟಪ: ಗರಿಷ್ಠ ೫ ವಿದ್ಯಾರ್ಥಿಗಳ ತಂಡದಲ್ಲಿ ಮಕ್ಕಳ ಮಂಟಪ ಸ್ಪರ್ಧೆ ಆಯೋಜಿಸಲ್ಪಟ್ಟಿದೆ.
ಛದ್ಮವೇಷ ಸ್ಪರ್ಧೆ: ಎಲ್.ಕೆ.ಜಿ. ಯಿಂದ ೧ನೇ ತರಗತಿಯವರೆಗಿನ ವಿಭಾಗ, ೨ನೇ ತರಗತಿಯಿಂದ ೪ನೇ ತರಗತಿಯವರೆಗಿನ ವಿಭಾಗ, ೫ನೇ ತರಗತಿಯಿಂದ ೭ನೇ ತರಗತಿ ವಿಭಾಗದಲ್ಲಿ ಛಧ್ಮವೇಷ ಸ್ಪರ್ಧೆಗಳು ಆಯೋಜಿಸಲ್ಪಟ್ಟಿದೆ.
ಕ್ಲೇ ಮಾಡೆಲಿಂಗ್ ಸ್ಪರ್ಧೆ: ೬ ಮತ್ತು ೭ನೇ ತರಗತಿ ವಿದ್ಯಾರ್ಥಿಗಳ ವಿಭಾಗ, ೮ ರಿಂದ ೧೦ನೇ ತರಗತಿ ವಿಭಾಗದ ವಿದ್ಯಾರ್ಥಿಗಳಿಗೆ ಸ್ಪರ್ಧೆಗಳು ನಡೆಯಲಿದೆ. ಸ್ಥಳದಲ್ಲೇ ಕ್ಲೇ ಮಾಡೆಲಿಂಗ್ ತಯಾರಿಸಬೇಕು.
ಮಕ್ಕಳ ದಸರಾ ಸ್ಪರ್ಧೆಗಳಿಗೆ ಹೆಸರು ನೋಂದಾಯಿಸಲು ತಾ. ೨೬ ಕೊನೆಯ ದಿನವಾಗಿದೆ. ದೂರವಾಣಿ ಸಂಖ್ಯೆಗಳೊAದಿಗೆ ಹೆಸರು ಕೂಡ ಇರಲಿ. ಹೆಸರು ನೋಂದಾಯಿಸಲು, ಮಕ್ಕಳ ಸಂತೆ: ಶಫಾಲಿ ರೈ (೯೭೪೧೫೨೩೪೮೪), ಮಕ್ಕಳ ಅಂಗಡಿ: ಪಲ್ಲವಿ ಪ್ರಸಾದ್ (೯೯೭೨೯೬೩೧೫೧) ಮಕ್ಕಳ ಮಂಟಪ: ಶಮ್ಮಿ ಪ್ರಭು (೯೪೪೯೮೩೩೧೭೯), ಛದ್ಮವೇಷ: ಗಾನಾ ಪ್ರಶಾಂತ್ (೯೪೪೮೭೧೩೭೪೩), ಕ್ಲೇ ಮಾಡೆಲಿಂಗ್: ರಾಧಿಕ ವಿಶ್ವ (೯೭೪೧೭೮೯೨೭೧) ಈ ದೂರವಾಣಿ ಯನ್ನು ಸಂಪರ್ಕಿಸಬಹುದು.