ಮಡಿಕೇರಿ, ಸೆ. ೧೮: ಭಗವದ್ಗೀತೆಯು ಪ್ರತಿಯೊಬ್ಬ ಹಿಂದೂ ವ್ಯಕ್ತಿಯ ಜೀವನವನ್ನು ಉತ್ತಮವಾಗಿ ರೂಪಿಸುವ ಹಿನ್ನೆಲೆಯ ಗ್ರಂಥವಾಗಿದೆ. ಶ್ರೀ ಕೃಷ್ಣನು ಪಾರ್ಥನಿಗೆ ಬೋಧಿಸಿದ ಗೀತೆಯ ಪ್ರತಿಯೊಂದು ಶ್ಲೋಕವೂ ಸುದೀರ್ಘ ಅಧ್ಯಯನ ಮಾಡುವಂತಹ ಮಹತ್ವ ಹೊಂದಿದೆ. ಇದನ್ನು ಎಲ್ಲ ಜಾತಿ, ಜನಾಂಗ ಹಾಗೂ ಮಕ್ಕಳು, ವಯಸ್ಕರೆನ್ನದೆ ಪ್ರತಿಯೊಬ್ಬರೂ ಕಲಿತು ಅರ್ಥೈಸಿಕೊಂಡು ಸಂಸ್ಕಾರವAತರಾಗಬೇಕೆAದು ‘ಶಕ್ತಿ’ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಕರೆಯಿತ್ತರು.
ಅವರು ಶನಿವಾರದಂದು ಮೂರ್ನಾಡಿನಲ್ಲ್ಲಿ ಸುಜ್ಞಾನ ಟ್ರಸ್ಟ್ನ ಪ್ರಾರಂಭೋತ್ಸವ ಹಾಗೂ ಬಡಗುತಿಟ್ಟಿನ ಹವ್ಯಾಸಿ ಕಲಾವಿದರಿಂದ ಏರ್ಪಟ್ಟಿದ್ದ ‘ಶ್ರೀ ಕೃಷ್ಣ ಸಂಧಾನ’ ಎಂಬ ಕಥಾವಸ್ತ್ತುವಿನ ಯಕ್ಷಗಾನ ತಾಳ ಮದ್ದಳೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ನೂತನ ಸುಜ್ಞಾನ ಟ್ರಸ್ಟ್ನ ಅಧ್ಯಕ್ಷ ಮಹಾಬಲೇಶ್ವರಭಟ್ ಅವರು ಮಾತನಾಡಿ ಈ ಟ್ರಸ್ಟ್ ಅನ್ನು ರಚಿಸಿರುವ ಮುಖ್ಯ ಉದ್ದೇಶದ ಕುರಿತು ಮಾಹಿತಿಯಿತ್ತರು. ರಾಮಾಯಣ, ಮಹಾಭಾರತಗಳಂತಹ ಹಿಂದೂ ಗ್ರಂಥಾಭಿಯಾನ, ಹಿಂದೂ ಧಾರ್ಮಿಕ ಸಂಘಟನೆ ಸುಜ್ಞಾನ ಟ್ರಸ್ಟ್ನ ಮುಖ್ಯ ಉದ್ದೇಶವಾಗಿದೆ, ಎಲ್ಲ ಜಾತಿ ಜನಾಂಗÀಗಳು ಈ ಮೂಲಕ ಧಾರ್ಮಿಕ ಪ್ರಜ್ಞೆಯಿಂದ ಒಗ್ಗೂಡಬೇಕು ಎಂದು ಕರೆಯಿತ್ತರು.
ಮುಖ್ಯ ಅತಿಥಿಯಾಗಿದ್ದ ಮೂರ್ನಾಡು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸುಜಾತ ಅವರು ಮಾತನಾಡಿ ಸದ್ವಿಚಾರಗಳು, ಧಾರ್ಮಿಕ ಜಾಗೃತಿಯಂತಹ ಸರ್ವರಿಗೂ ಪ್ರಯೋಜನಕಾರಿಯಾಗುವಂತಹ ಇಂತಹ ಕಾರ್ಯಕ್ರಮಗಳು ಆಗಿಂದಾಗ್ಗೆ ನಡೆಯುತ್ತಿರಲಿ ಎಂದು ಹಾರೈಸಿದರು. ಸಭೆಯಲ್ಲಿ ಪ್ರಮುಖರುಗಳಾದ ಅವರೆಮಾದಂಡ ಸುಗುಣ ಸುಬ್ಬಯ್ಯ, ವಿನಾಯಕ ಭಟ್, ವೇದಮೂರ್ತಿ ಜನಾರ್ದನ ಭಟ್, ಹೆಚ್.ಪಿ. ದಿನೇಶ್ ಮೊದಲಾದವರಿದ್ದರು.