ಗೋಣಿಕೊಪ್ಪಲು, ಸೆ. ೧೮: ವೀರಾಜಪೇಟೆ ತಾಲೂಕು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಗಣೇಶ್ ಅಧ್ಯಕ್ಷತೆಯಲ್ಲಿ ಅಂರ‍್ರಾಷ್ಟಿçÃಯ ಕ್ರೀಡಾಪಟು ಮೇಘನಾಳನ್ನು ಸನ್ಮಾನಿಸಿ ಗೌರವಿಸಲಾಯಿತು. ನೆಟ್‌ಬಾಲ್ ಕ್ರೀಡೆಯಲ್ಲಿ ಭಾರತ ತಂಡವನ್ನು ಉಪನಾಯಕಿಯಾಗಿ ಮುನ್ನಡೆಸಿದ್ದ ಮೇಘನಾಳ ಸಾಧನೆ ಗುರುತಿಸಿ ಸನ್ಮಾನಿಸಿ, ಗೌರವಿಸಲಾಯಿತು.
ಈ ವೇಳೆ ಸಂಘದ ಕಾರ್ಯದರ್ಶಿ ಬಿ.ಎಂ. ಜನಾರ್ಧನ್, ಉಪಾಧ್ಯಕ್ಷ ಪುರುಷೋತ್ತಮ್, ಗೌರವ ಅಧ್ಯಕ್ಷ ರಾಜ, ಖಜಾಂಚಿ ಸತೀಶ್, ನಿರ್ದೇಶಕರುಗಳಾದ ನಾರಾಯಣ, ಲಿಂಗಪ್ಪ, ಅನಿತ, ರೂಪ, ಹರೀಶ್ ಮುಂತಾದವರು ಇದ್ದರು.