ಶ್ರೀಮಂಗಲ, ಸೆ. ೧೮: ನಂಬರ್ ೨೭೯೭ ಟಿ.ಶೆಟ್ಟಿಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೨೦೨೧-೨೨ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಕುಂಞAಗಡ ಅರುಣ್ ಭೀಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅರುಣ್ ಭೀಮಯ್ಯ ಅವರು ಸಂಘವು ೨೦೨೧-೨೨ನೇ ಸಾಲಿನಲ್ಲಿ ಒಟ್ಟು ೨೬೧.೫೬ ಲಕ್ಷ ರೂ.ಗಳ ವಹಿವಾಟು ನಡೆಸುವ ಮೂಲಕ ರೂ. ೫೭.೭೧ ಲಕ್ಷ ನಿವ್ವಳ ಲಾಭ ಗಳಿಸಿದೆ. ಇದರಿಂದ ಸದಸ್ಯರಿಗೆ ಶೇಕಡ ೨೫ ಡಿವಿಡೆಂಡ್ ನೀಡಲಾಗುವುದು. ಸಂಘದ ಆಡಿಟ್ ವರ್ಗೀಕರಣ 'ಎ' ತರಗತಿ ಇದೆ. ಶ್ರೀಮಂಗಲ, ಸೆ. ೧೮: ನಂಬರ್ ೨೭೯೭ ಟಿ.ಶೆಟ್ಟಿಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೨೦೨೧-೨೨ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಕುಂಞAಗಡ ಅರುಣ್ ಭೀಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅರುಣ್ ಭೀಮಯ್ಯ ಅವರು ಸಂಘವು ೨೦೨೧-೨೨ನೇ ಸಾಲಿನಲ್ಲಿ ಒಟ್ಟು ೨೬೧.೫೬ ಲಕ್ಷ ರೂ.ಗಳ ವಹಿವಾಟು ನಡೆಸುವ ಮೂಲಕ ರೂ. ೫೭.೭೧ ಲಕ್ಷ ನಿವ್ವಳ ಲಾಭ ಗಳಿಸಿದೆ. ಇದರಿಂದ ಸದಸ್ಯರಿಗೆ ಶೇಕಡ ೨೫ ಡಿವಿಡೆಂಡ್ ನೀಡಲಾಗುವುದು. ಸಂಘದ ಆಡಿಟ್ ವರ್ಗೀಕರಣ 'ಎ' ತರಗತಿ ಇದೆ. ೧೩೯೪.೨೮ ಲಕ್ಷಗಳನ್ನು ಠೇವಣಿ ಮಾಡಲಾಗಿದೆ.
೨೦೨೧-೨೨ನೇ ಸಾಲಿನಲ್ಲಿ ಕೆ.ಸಿ.ಸಿ. ಫಸಲು ಸಾಲವೂ ಸೇರಿದಂತೆ ಸದಸ್ಯರ ಅವಶ್ಯಕತೆಗನುಗುಣವಾಗಿ ರೂ. ೨೧೩೫.೬೧ ಲಕ್ಷಗಳ ಸಾಲ ವಿತರಿಸ ಲಾಗಿದೆ. ೨೦೨೧-೨೨ನೇ ಸಾಲಿನಲ್ಲಿ ಸದಸ್ಯರು ಮತ್ತು ಗ್ರಾಹಕರಿಗೆ ರೂ. ೨೬೧.೫೬ ಲಕ್ಷಗಳ ರಸಗೊಬ್ಬರ ಮಾರಾಟ ಮಾಡಿ ವ್ಯಾಪಾರ ಲಾಭ ರೂ. ೮.೦೨ ಲಕ್ಷ ಗಳಿಸಿದೆ ಎಂದು ಮಾಹಿತಿ ನೀಡುವುದರೊಂದಿಗೆ ಸದಸ್ಯರು ತಾವು ಪಡೆದ ಸಾಲವನ್ನು ನಿಗದಿತ ಸಮಯದಲ್ಲಿ ಪಾವತಿ ಮಾಡಿ ಸಂಘದ ಪ್ರಗತಿಗೆ ಸಹಕರಿಸಬೇಕೆಂದು ಕೋರಿದರು. ಈ ಸಂದರ್ಭ ೨೦೨೧-೨೨ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ.ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಮೊಬಲಗು ಹಾಗೂ ಪ್ರಮಾಣ ಪತ್ರಗಳ ಪ್ರೋತ್ಸಾಹಕ ಬಹುಮಾನ ನೀಡಲಾಯಿತು.
ವೇದಿಕೆಯಲ್ಲಿ ಸಂಘದ ಅಧ್ಯಕ್ಷ ಕುಂಞAಗಡ ಅರುಣ್ ಭೀಮಯ್ಯ, ಉಪಾಧ್ಯಕ್ಷ ತಡಿಯಂಗಡ ಕರುಂಬಯ್ಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚೆಟ್ಟಂಗಡ ಸೀತಮ್ಮ, ನಿರ್ದೇಶಕರಾದ ಚೊಟ್ಟೆಯಾಂಡಮಾಡ ಜೆ.ರಂಜಿ, ತೀತೀರ ಸೋಮಣ್ಣ, ಮಚ್ಚಮಾಡ ಮುತ್ತಪ್ಪ, ಕಟ್ಟೇರ ದೇವಮ್ಮಾಜಿ, ಮಚ್ಚಮಾಡ ತಂಗಮ್ಮ, ಎಂ. ಶಂಭು, ಕುಡುವಚೇರಿ ಉಮೇಶ್, ಪಿ.ಕೆ.ಚುಬ್ರ, ಹೆಚ್.ಸಿ. ರಾಜು, ಮಚ್ಚಮಾಡ ಶ್ಯಾಮ್, ಮಾಣೀರ ಉಮೇಶ್, ಕಟ್ಟೇರ ತಿಮ್ಮಯ್ಯ ಡಿ.ಸಿ.ಸಿ. ಬ್ಯಾಂಕ್ ಸೂಪರ್ ವೈಸರ್ ಎಂ.ಬಿ. ಕೀರ್ತನ್, ಅಕೌಂಟೆAಟ್ ಚಂಗುಲAಡ ಅನಿಲಾವತಿ ಉಪಸ್ಥಿತರಿದ್ದರು.