ಸುಂಟಿಕೊಪ್ಪ, ಸೆ. ೧೮: ಮಾದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ೨೦೨೧-೨೨ನೇ ಸಾಲಿನಲ್ಲಿ ರೂ. ೪೩,೨೬,೨೩೦ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಬಿ.ಎ. ಮೊಣ್ಣಪ್ಪ ಮಾಹಿತಿ ನೀಡಿದರು.

ಮಾದಾಪುರ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ೯೨ನೇ ವಾರ್ಷಿಕ ಮಹಾಸಭೆಯು ಸಂಘದ ಸಭಾಂಗಣದಲ್ಲಿ ಅಧ್ಯಕ್ಷ ಮೊಣ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಂಘದಲ್ಲಿ ೧೫೦೫ ಸದಸ್ಯರುಗಳಿದ್ದು ಇವರೆಲ್ಲರ ಪಾಲು ಬಂಡವಾಳ ರೂ. ೯೨,೩೦,೬೧೯ ಆಗಿದೆ. ಸಂಘವು ‘ಎ’ ತರಗತಿಯನ್ನು ಹೊಂದಿದ್ದು, ಸದಸ್ಯರಿಗೆ ಶೇಕಡ ೧೮ ರಷ್ಟು ಡಿವಿಡೆಂಡ್ ನೀಡಲಾಗುವುದು. ಸಂಘದಲ್ಲಿ ಸದಸ್ಯರಿಂದ ಹಾಗೂ ಸದಸ್ಯರಲ್ಲದವರಿಂದಲೂ ವಿವಿಧ ಠೇವಣಿಗಳನ್ನು ಸಂಗ್ರಹಿಸಿದ್ದು, ೩೧-೩-೨೦೨೨ ಕ್ಕೆ ಒಟ್ಟು ರೂ ೭,೭೭,೦೨೪೬೨ ಠೇವಣಾತಿ ಇದೆ. ಪ್ರಸಕ್ತ ಸಾಲಿನಲ್ಲಿ ೩೮೦ ಸದಸ್ಯರುಗಳಿಗೆ ಕೆ.ಸಿ.ಸಿ. ಸಾಲ ೬,೭೦,೬೩,೯೦೦ ರೂ ನೀಡಲಾಗಿದೆ. ಈ ಪೈಕಿ ಕೆಡಿಸಿಸಿ ಬ್ಯಾಂಕ್‌ನಿAದ ೫,೯೭,೮೨,೧೦೦ ರೂ ಹಾಗೂ ಸ್ವಂತ ಪಾಲು ಬಂಡವಾಳದಿAದ ೭೨,೮೧,೮೦೦ ರೂ ಸಾಲ ನೀಡಲಾಗಿದೆ. ಆಭರಣ ಸಾಲ ರೂ. ೧,೪೪,೪೯,೪೦೦ ವಿತರಿಸಿದ್ದು, ಆ ಪೈಕಿ ೨,೨೮,೦೦೦ ರೂ ಅವಧಿ ಮೀರಿದ ಸಾಲ ಇದೆ ಮಧ್ಯಮಾವಧಿ ಕೃಷಿ ಆಧಾರಿತ ಗೊಬ್ಬರ ಸಾಲ, ವ್ಯಾಪಾರ ಅಭಿವೃದ್ಧಿ ಸಾಲವನ್ನು, ಠೇವಣಿ ಆಧಾರಿತ ಸಾಲವನ್ನು ಸಂಘದಿAದ ನೀಡಲಾಗಿದೆ ಎಂದು ಅಧ್ಯಕ್ಷರು ವಿತರಣೆ ನೀಡಿದರು. ಸದಸ್ಯರುಗಳು ವಾಯಿದೆ ಮೀರಿದ ಸಾಲ ಸಕಾಲದಲ್ಲಿ ಕಟ್ಟಬೇಕು ಅಥವಾ ನವೀಕರಿಸಬೇಕು ಇಲ್ಲದಿದ್ದರೆ ಅವರ ಜಾಮೀನುದಾರರಿಗೆ ಸಾಲ ನೀಡಲಾಗುವುದಿಲ್ಲ ಎಂದು ಮಹಾಸಭೆಯಲ್ಲಿ ಸಿಇಓ ಕಾವೇರಪ್ಪ ಹೇಳಿದಾಗ ಪರ - ವಿರೋಧ ಚರ್ಚೆಗೆ ಗ್ರಾಸ ನೀಡಿತು.

ಲೆಕ್ಕಪತ್ರ ವರದಿಯಲ್ಲಿ ಅನೇಕ ಪೈಕಿ ೨,೨೮,೦೦೦ ರೂ ಅವಧಿ ಮೀರಿದ ಸಾಲ ಇದೆ ಮಧ್ಯಮಾವಧಿ ಕೃಷಿ ಆಧಾರಿತ ಗೊಬ್ಬರ ಸಾಲ, ವ್ಯಾಪಾರ ಅಭಿವೃದ್ಧಿ ಸಾಲವನ್ನು, ಠೇವಣಿ ಆಧಾರಿತ ಸಾಲವನ್ನು ಸಂಘದಿAದ ನೀಡಲಾಗಿದೆ ಎಂದು ಅಧ್ಯಕ್ಷರು ವಿತರಣೆ ನೀಡಿದರು. ಸದಸ್ಯರುಗಳು ವಾಯಿದೆ ಮೀರಿದ ಸಾಲ ಸಕಾಲದಲ್ಲಿ ಕಟ್ಟಬೇಕು ಅಥವಾ ನವೀಕರಿಸಬೇಕು ಇಲ್ಲದಿದ್ದರೆ ಅವರ ಜಾಮೀನುದಾರರಿಗೆ ಸಾಲ ನೀಡಲಾಗುವುದಿಲ್ಲ ಎಂದು ಮಹಾಸಭೆಯಲ್ಲಿ ಸಿಇಓ ಕಾವೇರಪ್ಪ ಹೇಳಿದಾಗ ಪರ - ವಿರೋಧ ಚರ್ಚೆಗೆ ಗ್ರಾಸ ನೀಡಿತು.

ಲೆಕ್ಕಪತ್ರ ವರದಿಯಲ್ಲಿ ಅನೇಕ ನ್ಯೂನತೆಗಳಿವೆ ಅದನ್ನು ಸರಿಪಡಿಸ ಬೇಕು ಎಂದು ಪಾಸುರ ಬೋಪಯ್ಯ ಹೇಳಿದರು. ಡಿಸಿಸಿ ಬ್ಯಾಂಕಿನ ಶತಮಾನೋತ್ಸವ ಸಮಾರಂಭದಲ್ಲಿ ಸಣ್ಣ ಪುಟ್ಟ ಸಂಘಗಳನ್ನು ಕಡೆಗಣಿಸಲಾಗಿದೆ ಎಂದು ಹಾಲೇರಿಯ ಬಿದ್ದಪ್ಪ ಹೇಳಿದರು.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸದಸ್ಯರುಗಳನ್ನು ಸದಸ್ಯತ್ವಕ್ಕೆ ಸೇರಿಸುವಂತೆ ಸೋಮಪ್ಪ ಆಗ್ರಹಿಸಿದರು. ಈ ಸಭೆಯಲ್ಲಿ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಎಸ್.ಕಾವೇರಪ್ಪ, ಉಪಾಧ್ಯಕ್ಷ ತಿಲಕ್‌ಕುಮಾರ್, ನಿರ್ದೇಶಕರುಗಳಾದ ಉಮೇಶ್ ಉತ್ತಪ್ಪ, ಸಿ.ಎ. ತಮ್ಮಯ್ಯ, ಎನ್.ಸಿ. ಕಾಳಪ್ಪ, ಎನ್.ಎಸ್. ಬೆಳ್ಯಪ್ಪ, ಬಿ.ಎ. ಧೂಮಪ್ಪ, ನಳಿನಿ ತಮ್ಮಯ್ಯ, ಎಂ.ಪಿ. ಪೊನ್ನವ್ವ, ಕೆ.ಎ. ಲತೀಫ್, ರೇಣುಕಮ್ಮ, ಎಂ.ವೈ. ಕೇಶವ, ವೃತ್ತಿಪರ ನಿರ್ದೇಶಕರಾದ ಕೆಡಿಸಿಸಿ ಬ್ಯಾಂಕ್‌ನ ಬಿ.ಆರ್. ಗೀತಾ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.