ಶನಿವಾರಸಂತೆ, ಸೆ. ೧೭: ಶನಿವಾರಸಂತೆಯ ಭಾರತಿ ವಿದ್ಯಾಸಂಸ್ಥೆ ಪ್ರೌಢಶಾಲಾ ವಿದ್ಯಾರ್ಥಿಗಳಾದ ಎಸ್.ವಿ. ಪ್ರೀತಂ ಹಾಗೂ ಎಸ್.ಎಸ್. ಜಯಂತ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಕರಾಟೆ ಮತ್ತು ಯೋಗ ವತಿಯಿಂದ ಕುಶಾಲನಗರದ ರೈತ ಭವನದಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಮತ್ತು ಯೋಗ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದಿದ್ದಾರೆ. ತರಬೇತಿದಾರ ಪಳನಿ, ಮುಖ್ಯ ಶಿಕ್ಷಕ ನರಸಿಂಹ ಮೂರ್ತಿ, ಸಹಶಿಕ್ಷಕರಾದ ಗೋಪಾಲ್, ರಂಗಸ್ವಾಮಿ, ಮಂಗಳಾ, ಭವಾನಿ, ಸರೋಜಿನಿ, ಶಬಾನಾ ಇದ್ದಾರೆ.