ಮಡಿಕೇರಿ, ಸೆ. ೧೭: ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕಿನ ೨೦೨೧-೨೨ನೇ ಸಾಲಿನ ವಾರ್ಷಿಕ ಮಹಾಸಭೆಯು ಕೊಡವ ಸಮಾಜದಲ್ಲಿ ಅಧ್ಯಕ್ಷ ಸಿ.ಕೆ. ಬಾಲಕೃಷ್ಣ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು. ಈ ಸಂದರ್ಭ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಮೂರು ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ನೀಡಲಾಯಿತು.

ಈ ಸಂದರ್ಭ ಬ್ಯಾಂಕಿನ ಉಪಾಧ್ಯಕ್ಷ ಬಿ.ಎಂ. ರಾಜೇಶ್, ನಿರ್ದೇಶಕರುಗಳಾದ ಬಿ. ರಾಜೇಶ್ ಯಲ್ಲಪ್ಪ, ಬಿ.ಕೆ. ಜಗದೀಶ್, ಜಿ.ಎಂ. ಸತೀಶ್ ಪೈ, ಎಸ್.ಸಿ. ಸತೀಶ್, ಕನ್ನಂಡ ಸಂಪತ್, ಬಿ.ಪಿ. ಮಾಚಮ್ಮ, ಕಾವೇರಮ್ಮ ಸೋಮಣ್ಣ, ಆರ್ ಗಿರೀಶ್, ಬಿ.ವಿ. ರೋಷನ್, ಕೆ.ಆರ್. ನಾಗೇಶ್, ಗೋಪಾಲಕೃಷ್ಣ ಜಿ.ಕೆ. ಹಾಗೂ ಬ್ಯಾಂಕಿನ ವ್ಯವಸ್ಥಾಪಕ ಪದ್ಮನಾಭ ಕಿಣಿ ಮತ್ತು ಸಿಬ್ಬಂದಿಗಳು, ಸದಸ್ಯರುಗಳು ಹಾಜರಿದ್ದರು.