ಮಡಿಕೇರಿ, ಸೆ. ೧೭: ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಟ್ಟಡ ಪರವಾನಿಗೆ ಪಡೆಯಲು ಐಚಿಟಿಜ ಚಿಟಿಜ buiಟಜiಟಿg ಠಿಟಚಿಟಿ ಂಠಿಠಿಡಿovಚಿಟ sಥಿsಣem (ಐಃPಂS/ಓiಡಿmಚಿಟಿ-೨) ತಂತ್ರಾAಶವನ್ನು ಬಳಸಲಾಗುತ್ತಿತ್ತು. ಆದರೆ ನಿರ್ಮಾಣ-೨ ತಂತ್ರಾAಶದಲ್ಲಿ ಸಾಕಷ್ಟು ತಾಂತ್ರಿಕ ದೋಷಗಳು ಕಂಡುಬAದ ಹಿನ್ನೆಲೆ, ಕಟ್ಟಡ ಪರವಾನಿಗೆ ಅರ್ಜಿಯನ್ನು ತಂತ್ರಾAಶದಲ್ಲಿ ನಿರ್ವಹಣೆ ಮಾಡುವಾಗ ತಾಂತ್ರಿಕ ಸಮಸ್ಯೆಗಳು ಕಂಡು ಬಂದಿರುವುದರಿAದ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿದ್ದು, ಸಾರ್ವಜನಿಕ ಹಿತದೃಷ್ಟಿಯನ್ನು ಗಮನದಲ್ಲಿ ಇಟ್ಟುಕೊಂಡು ಕೆಎಂಡಿಎಸ್ ನಿಂದ ಅಭಿವೃದ್ಧಿಪಡಿಸಲಾದ ನಿರ್ಮಾಣ-೧ ತಂತ್ರಾAಶವನ್ನು ಬಳಸಲು ಸೂಚಿಸಲಾಗಿತ್ತು.
ಪ್ರಸ್ತುತ ನಿರ್ಮಾಣ-೨ ತಂತ್ರಾAಶದ ಎಲ್ಲಾ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲಾಗಿದ್ದು, ಸಾರ್ವಜನಿಕರು ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನೋಂದಾಯಿತ ವಾಸ್ತುಶಿಲ್ಪಿ/ ಅಭಿಯಂತರರು ನಿರ್ಮಾಣ-೨ ತಂತ್ರಾAಶದ ಮೂಲಕ ಕಟ್ಟಡ ಪರವಾನಿಗೆಗೆ ಅರ್ಜಿ ಸಲ್ಲಿಸುವಂತೆ ಕೋರಿದೆ.
ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಟ್ಟಡ ಪರವಾನಿಗೆ ಕೋರಿ ಅರ್ಜಿ ಸಲ್ಲಿಸುವವರು Uಖಐ: hಣಣಠಿs://bhu-ಥಿoರಿಚಿಟಿe.ಞಚಿಡಿಟಿಚಿಣಚಿಞಚಿ.gov.iಟಿ/ಓIಖಒಂಓA೨ಠಿ ಆನ್ಲೈನ್ ತಂತ್ರಾAಶವನ್ನು ಬಳಸುವಂತೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ತಿಳಿಸಿದ್ದಾರೆ.