ಗೋಣಿಕೊಪ್ಪ ವರದಿ, ಸೆ. ೧೭: ಗೋಣಿಕೊಪ್ಪ ಮುಳಿಯ ಜ್ಯುವೆಲ್ಸ್ನಲ್ಲಿ ರೆಡ್ ಆ್ಯಂಡ್ ಗ್ರೀನ್ ಫೆಸ್ಟ್ಗೆ ಶುಕ್ರವಾರ ಚಾಲನೆ ನೀಡಲಾಯಿತು. ಕಾವೇರಿ ಕಾಲೇಜು ಉಪನ್ಯಾಸಕಿ ಡಾ. ಮುಲ್ಲೇಂಗಡ ರೇವತಿ ಪೂವಯ್ಯ, ಇಗ್ಗುತ್ತಪ್ಪ ಕೊಡವ ಸಂಘದ ಕಾರ್ಯದರ್ಶಿ ಕೊಣಿಯಂಡ ಬೋಜಮ್ಮ ಉತ್ತಪ್ಪ, ಗ್ರಾ.ಪಂ. ಸದಸ್ಯೆ ಮನ್ನಕಮನೆ ಸೌಮ್ಯಬಾಲು, ಶಿಕ್ಷಕಿ ಕವಿತ ಪೂರ್ಣಚಂದ್ರ, ಹಿರಿಯರಾದ ವಾಣಿ, ವಕೀಲ ನೆಲ್ಲಮಕ್ಕಡ ಪ್ರತಿಷ್ಠ ಮಾದಯ್ಯ ಉದ್ಘಾಟಿಸಿದರು. ನಂತರ ಕೆಂಪು ಮತ್ತು ಹಸಿರು ವಿಶೇಷತೆ ಸಾರುವ ಟ್ರೆಂಡಿ ಡಿಸೈನ್‌ಗಳ ಪ್ರದರ್ಶನ ನೀಡಲಾಯಿತು.

ಮುಳಿಯ ಸಂಸ್ಥೆ ಆಡಳಿತ ನಿರ್ದೇಶಕ ಕೃಷ್ಣ ನಾರಾಯಣ ಮುಳಿಯ ಮಾತನಾಡಿ, ಕೊಡಗಿನ ಆಭರಣಗಳಿಗೆ ಮೊದಲ ಬಾರಿಗೆ ೯೧೬ ಗುಣಮಟ್ಟ ನೀಡಿದ ಹೆಗ್ಗಳಿಕೆ ಮುಳಿಯ ಹೊಂದಿದೆ. ಗುಣಮಟ್ಟಕ್ಕೆ ಆದ್ಯತೆ ನೀಡಲಾಗುತ್ತಿದೆ. ತಾ. ೨೨ ರವರೆಗೆ ಮೇಳ ನಡೆಯಲಿದೆ ಎಂದರು. ವ್ಯವಸ್ಥಾಪಕ ಕಿಶೋರ್ ಸಾಲಿಯಾನ್ ಇದ್ದರು.