ಕುಶಾಲನಗರ, ಸೆ. ೧೭: ಪದವಿ ಪೂರ್ವ ಶಿಕ್ಷಣ ಇಲಾಖೆ, ಕುಶಾಲ ನಗರ ಸರ್ಕಾರಿ ಪದವಿಪೂರ್ವ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಕುಶಾಲನಗರದಲ್ಲಿ ತಾಲೂಕು ಮಟ್ಟದ ಕಾಲ್ಚೆಂಡು ಪಂದ್ಯಾಟ ನಡೆಯಿತು.
ಪಂದ್ಯದ ಉದ್ಘಾಟನಾ ಕಾರ್ಯ ಕ್ರಮವನ್ನು ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ವಸಂತ್‌ಕುಮಾರ್ ನೆರವೇರಿಸಿದರು. ಕ್ರೀಡೋತ್ಸವ ಯಶಸ್ವಿಯಾಗಲಿ ಎಂದು ಹಾರೈಸಿದ ಅವರು, ಕ್ರೀಡೆ ವಿದ್ಯಾರ್ಥಿಗಳ ಅವಿಭಾಜ್ಯ ಅಂಗ. ಸದೃಢ ಮನಸ್ಸು, ಸದೃಢ ದೇಹ ನಿರ್ಮಾಣವಾಗಲು ಕ್ರೀಡೆ ತುಂಬಾ ಅವಶ್ಯ ಎಂದರು. ಪಂದ್ಯಾಟದಲ್ಲಿ ೧೬ ತಂಡಗಳು ಭಾಗವಹಿಸಿದ್ದು ಕುಶಾಲನಗರ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಥಮ ಪಾರಿತೋಷಕ ಪಡೆಯಿತು. ದ್ವಿತೀಯ ತಂಡವಾಗಿ ಕನ್ನಡ ಭಾರತಿ ಪದವಿ ಪೂರ್ವ ಕಾಲೇಜು ಹೊರ ಹೊಮ್ಮಿತು. ಸಮಾರೋಪ ಸಮಾರಂಭದಲ್ಲಿ ಪಾರಿ ತೋಷಕ ವಿತರಿಸಿದ ಪ್ರಾಂಶುಪಾಲ ಸತೀಶ್ ಬಾಬು ವಿಜೇತರಿಗೆ ಅಭಿನಂದನೆ ಗಳನ್ನು ಸಲ್ಲಿಸಿದರು.
ಸಮಾರೋಪ ಸಮಾರಂಭದಲ್ಲಿ ಜಿ. ಕೆಂಚಪ್ಪ, ನಿವೃತ್ತ ಉಪ ನಿರ್ದೇಶಕರು, ಉಪನ್ಯಾಸಕರ ಸಂಘದ ಅಧ್ಯಕ್ಷ ಫಿಲಿಪ್ ವಾಸ್, ಕಾರ್ಯದರ್ಶಿ ಹಂಡ್ರAಗಿ ನಾಗರಾಜ್, ಕ್ರೀಡಾ ಕಾರ್ಯದರ್ಶಿ ನಾಗೇಶ್, ಪ್ರೌಢಶಾಲಾ ಉಪ ಪ್ರಾಂಶುಪಾಲ ಪರಮೇಶ್ವರ್, ಸದಾಶಿವ ಪಲ್ಲೇದ್, ಉ.ರ. ನಾಗೇಶ್, ಚೆನ್ನಕೇಶವ ಮೂರ್ತಿ, ಶಾಂತಿ, ಗುರುಸ್ವಾಮಿ, ಮೋಹನ್‌ಕುಮಾರ್, ಕೃಪಾ, ಕಾವ್ಯ ಇದ್ದರು. ನಂದೀಶ್ ನಿರೂಪಿಸಿದರು. ತೀರ್ಪುಗಾರರಾಗಿ ಪ್ರತಾಪ್, ದಿನೇಶ್, ಅಭಿ ಕಾರ್ಯ ನಿರ್ವಹಿಸಿದರು.