ಸುಂಟಿಕೊಪ್ಪ, ಸೆ. ೧೬: ನವಜಾತ ಶಿಶು ಮರಣ ತಪ್ಪಿಸುವ ಮತ್ತು ಗರ್ಭಿಣಿ ಸ್ತಿçÃಯರಲ್ಲಿ ರಕ್ತಹೀನತೆ ಯನ್ನು ಹೋಗಲಾಡಿಸಿ ಇಬ್ಬರನ್ನೂ ಆರೋಗ್ಯವಂತರಾಗಿಸಿ ಉತ್ತಮ ತಾಯಿ-ಮಗು ಮೂಲಕ ಆರೋಗ್ಯ ವಂತ ಸಮಾಜವನ್ನು ಕಟ್ಟುವಲ್ಲಿ ಪೋಷಣ್ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣ ಮತ್ತು ಮಹತ್ವ ದ್ದಾಗಿದ್ದು ಇದನ್ನು ಪ್ರತಿಯೊಬ್ಬರು ಸದುಪಯೋಗ ಪಡಿಸಿಕೊಳ್ಳುವತ್ತ ಕೈಜೋಡಿಸಬೇಕೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸೋಮವಾರಪೇಟೆ ಮೇಲ್ವಿಚಾರಕಿ ಸಾವಿತ್ರವ್ವ ಕರೆ ನೀಡಿದರು.

ಕೊಡಗರಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ಕೊಡಗರಹಳ್ಳಿ ಅಂಗನವಾಡಿ ಕೇಂದ್ರ, ಉಪ್ಪುತೋಡು ಅಂಗನವಾಡಿ ಕೇಂದ್ರ ಕೊಡಗರಹಳ್ಳಿ ಮತ್ತು ಕೊಡಗರಹಳ್ಳಿ ಪ್ರಾಥಮಿಕ ಶಾಲೆಯ ಜಂಟಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಕೇಂದ್ರ ಸರಕಾರದ ಈ ಯೋಜನೆ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ನಡೆಸಲಾಗುವ ಪೋಷಣ್ ಮಾಸಾಚರಣೆ ಮಹತ್ವದ ಕುರಿತು ಮಾಹಿತಿ ನೀಡಿದರು.

ಓರ್ವ ಮಹಿಳೆ ಗರ್ಭಿಣಿ ಎಂದು ಗೊತ್ತಾದ ದಿನದಿಂದ ಮುಂದಿನ ಸಾವಿರ ದಿನಗಳವರೆಗೆ ತಾಯಿ-ಮಗುವಿನ ಆರೋಗ್ಯದ ಕಾಳಜಿ ಯನ್ನು ಈ ಯೋಜನೆ ಒಳ ಗೊಂಡಿದ್ದು ವಿವಿಧ ಪೌಷ್ಟಿಕಾಂಶಗಳು ಒಳಗೊಂಡ ಸಮತೋಲಿತ ಆಹಾರವನ್ನು ತಾಯಂದಿರು ಸೇವಿಸುವಂತಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೊಡಗರಹಳ್ಳಿ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಭಾಗೀರಥಿ ಮಾತನಾಡಿ, ಈ ಕಾರ್ಯ ಕ್ರಮವನ್ನು ಮಹಿಳೆಯರಿಗಾಗಿ ಮಾತ್ರ ಆಯೋಜಿಸದೆ ಪುರುಷರನ್ನೂ ಸೇರಿಸಿಕೊಂಡು ಅವರಿಗೂ ಮಾಹಿತಿಯನ್ನು ನೀಡುವಂತಾಗಿ ಎಲ್ಲರೂ ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತಾಗಬೇಕೆAದು ಅಭಿಪ್ರಾಯಿಸಿದರು.

ಕಾರ್ಯಕ್ರಮದಲ್ಲಿ ಕಿರಿಯ ಆರೋಗ್ಯ ಸಹಾಯಕಿ ಟಿಸ್ಮಿ ತೋಮಸ್, ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ರೂಬಿ ಕಾರ್ಯಕ್ರಮ ಕುರಿತು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ ಕಲಾಮಣಿ ಅವರು ಮಾತನಾಡಿ, ೨೦೧೯ ರಿಂದ ಈ ಕಾರ್ಯಕ್ರಮ ಜಾರಿಗೆ ಬಂದಿದ್ದು, ಸಮತೋಲಿತ ಆಹಾರ ಮತ್ತು ಸಿರಿದಾನ್ಯಗಳ ಬಳಕೆಯಿಂದ ತಾಯಿ-ಮಗುವಿಗೆ ಉತ್ತಮ ಪೋಷಣೆಯ ಹಿನ್ನೆಲೆ ಆರೋಗ್ಯವಂತ ಸಮಾಜವನ್ನು ನಿರ್ಮಿಸುವ ನಿಟ್ಟಿನಲ್ಲಿ ನಾವೆಲ್ಲಾರೂ ಶ್ರಮಿಸೋಣ ಎಂದು ಕರೆ ನೀಡಿದರು.

ಕೊಡಗರಹಳ್ಳಿ ಅಂಗನವಾಡಿ ಕೇಂದ್ರ ಕಾರ್ಯಕರ್ತೆ ಸಾವಿತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರಲ್ಲದೆ ತರಕಾರಿಗಳ ಕುರಿತು ಹಾಡೊಂದನ್ನು ಹಾಡಿ ರಂಜಿಸಿದರು. ಮೇಲ್ವಿಚಾರಕಿ ಸಾವಿತ್ರವ್ವ ಕೂಡ ಪ್ರಾರ್ಥನಾ ಗೀತೆಯೊಂದನ್ನು ಹಾಡಿದರು. ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಪ್ರಾರ್ಥಿಸಿದರು.

ಕೊಡಗು ಪತ್ರಕರ್ತರ ಸಂಘದ ಕುಶಾಲನಗರ ತಾಲೂಕು ಸಂಘದ ಉಪಾಧ್ಯಕ್ಷ ಬಿ.ಸಿ. ದಿನೇಶ್ ಉದ್ಘಾಟಿಸಿ ಶುಭ ಕೋರಿದರು. ಕಾರ್ಯಕ್ರಮದಲ್ಲಿ ಗ್ರಾ.ಪಂ. ಸದಸ್ಯೆ ಚೆನ್ನಬಸವಿ, ಆಶಾ ಕಾರ್ಯಕರ್ತೆ ಯರಾದ ಗೀತಾ ಮತ್ತು ಕವಿತ ಪಂಚಾಯಿತಿ ಸಿಬ್ಬಂದಿ ದನ್ಯ, ಶಾಲಾ ಶಿಕ್ಷಕಿಯರಾದ ಸುಮ, ಯಶೋಧ, ಸೇರಿದಂತೆ ಮಕ್ಕಳ ಪೋಷಕರು, ಗರ್ಭೀಣಿಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂಗವಾಗಿ ವಿವಿಧ ತರಕಾರಿ, ಹಣ್ಣು ಹಂಪಲು ಗಳು, ಸೊಪ್ಪು ಕಾಯಿ ಪಲ್ಯಗಳು, ಏಕದಳ ಮತ್ತು ದ್ವಿದಳ ದಾನ್ಯಗಳು, ಕಬ್ಬು ಬೆಲ್ಲ, ಶುಂಠಿ ಜೌಷಧಿಯ ಮತ್ತು ಪೌಷ್ಟಿಕಾಂಶ ಆಹಾರ ಪದಾರ್ಥಗಳು ಪ್ರದರ್ಶನಗೊಂಡವು.