ಮಡಿಕೇರಿ, ಸೆ. ೧೬: ಕೊಡವ ಹಾಕಿ ಅಕಾಡೆಮಿ ವತಿಯಿಂದ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಕೊಡವ ಕುಟುಂಬಗಳ ನಡುವೆ ೫-ಎ ಸೈಡ್ (ರಿಂಕ್) ಹಾಕಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಅಕಾಡೆಮಿ ತಿಳಿಸಿದೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಕಾಡೆಮಿಯ ಅಧ್ಯಕ್ಷ ಪಾಂಡAಡ ಕೆ. ಬೋಪಣ್ಣ, ಕೋವಿಡ್ ಹಾಗೂ ಪ್ರಾಕೃತಿಕ ವಿಕೋಪ ಪರಿಸ್ಥಿತಿಯಿಂದ ಕೊಡವ ಹಾಕಿ ಅಕಾಡೆಮಿಯಿಂದ ಯಾವುದೇ ರೀತಿಯ ಕಾರ್ಯಕ್ರಮ ಆಯೋಜನೆ ಮಾಡಲಾಗಲಿಲ್ಲ. ಇದೀಗ ಕೊಡವ ಕೌಟುಂಬಿಕ ಹಾಕಿ ಜನಕ ಪಾಡಂಡ ಕುಟ್ಟಪ್ಪ (ಕುಟ್ಟಣಿ) ಸ್ಮರಣಾರ್ಥ ಅಕ್ಟೋಬರ್ ೨೭ ರಿಂದ ನವೆಂಬರ್ ೬ ರತನಕ ಪೊನ್ನಂಪೇಟೆಯ ಟರ್ಫ್ ಮೈದಾನದಲ್ಲಿ ಹಾಕಿ ಪಂದ್ಯಾಟ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಸೋಮವಾರಪೇಟೆ ತಾಲೂಕು ಉಪಾಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ ಮಾತನಾಡಿ, ನಾಕೌಟ್ ಮಾದರಿಯಲ್ಲಿ ಪಂದ್ಯಾವಳಿ ನಡೆಯಲಿದ್ದು, ನೋಂದಾವಣಿಗೆ ಅಕ್ಟೋಬರ್ ೧ ಕಡೆಯ ದಿನವಾಗಿದ್ದು, ಮೊದಲು ನೋಂದಾಯಿಸಿಕೊAಡ ೧೮೦ ತಂಡಗಳಿಗೆ ಮಾತ್ರ ಅವಕಾಶ ಇರಲಿದೆ. ರೂ. ೧ ಸಾವಿರ ಪ್ರವೇಶ ಶುಲ್ಕ ಪಾವತಿಸಿ ತಂಡವನ್ನು ನೋಂದಾಯಿ ಸಿಕೊಳ್ಳಬೇಕು. ಒಟ್ಟು ರೂ. ೨ ಲಕ್ಷ ಬಹುಮಾನ
(ಮೊದಲ ಪುಟದಿಂದ) ಮೊತ್ತ ಇದ್ದು, ವಿಜೇತ ತಂಡಕ್ಕೆ ರೂ. ೧ ಲಕ್ಷ ಬಹುಮಾನವನ್ನು ಪಾಂಡAಡ ಕುಟ್ಟಪ್ಪ ಅವರ ಪತ್ನಿ ಲೀಲಾ ಕುಟ್ಟಪ್ಪ ಅವರು ಪ್ರಾಯೋಜಿಸಿದ್ದಾರೆ. ಎರಡನೇ ಬಹುಮಾನ ರೂ . ೫೦ ಸಾವಿರ, ಸೆಮಿಫೈನಲ್ನಲ್ಲಿ ಸೋತ ಎರಡು ತಂಡಗಳಿಗೆ ತಲಾ ೧೫ ಸಾವಿರ ಹಾಗೂ ಕ್ವಾಟರ್ ಫೈನಲ್ನಲ್ಲಿ ಸೋತ ನಾಲ್ಕು ತಂಡಗಳಿಗೆ ತಲಾ ೫ ಸಾವಿರ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
ಮಡಿಕೇರಿ ತಾಲೂಕು ಉಪಾಧ್ಯಕ್ಷ ಬಡಕಡ ಡೀನಾ ಪೂವಯ್ಯ ಮಾತನಾಡಿ, ೫ ಜನ ಪಂದ್ಯಾಟದಲ್ಲಿ ಆಟವಾಡಲಿದ್ದು, ೩ ರಿಂದ ೫ ಮಂದಿ ಹೆಚ್ಚುವರಿ ಆಟಗಾರರನ್ನು ತಂಡದಲ್ಲಿ ಇರಬಹುದಾಗಿದೆ. ಒಟ್ಟು ೨೦ ನಿಮಿಷದಲ್ಲಿ ತಲಾ ೧೦ ನಿಮಿಷಗಳಂತೆ ಪ್ರಥಮಾರ್ಧ ಹಾಗೂ ದ್ವಿತೀಯಾರ್ಧ ಹಂತಗಳಲ್ಲಿ ಆಟ ನಡೆಯಲಿದ್ದು, ಪಂದ್ಯಾಟಕ್ಕೆ ರೂ. ೧೫ ಲಕ್ಷ ಖರ್ಚು ತಗುಲಲಿದೆ. ಮೈದಾನವೂ ೪೦*೨೫ ಅಳತೆಯಲ್ಲಿರಲಿದೆ ಎಂದು ಹೇಳಿದರು. ಅಕಾಡೆಮಿಯ ಕಾರ್ಯದರ್ಶಿ ಮಾಳೇಟೀರ ಶ್ರೀನಿವಾಸ್ ಮಾತನಾಡಿ, ಕೆಲವು ಕೊಡವ ಕುಟುಂಬಗಳಲ್ಲಿ ಆಟಗಾರರ ಕೊರತೆ ಇದೆ. ರಿಂಕ್ ಮಾದರಿಯ ಪಂದ್ಯಾಟದಿAದ ಕೊಡವ ಕೌಟುಂಬಿಕ ಹಾಕಿ ನಮ್ಮೆಯಲ್ಲಿ ಭಾಗವಹಿಸಲು ಸಾಧ್ಯವಾಗದ ಕುಟುಂಬಗಳು ಇಲ್ಲಿ ಭಾಗವಹಿಸಬಹುದಾಗಿವೆ. ಇದರಿಂದ ಪ್ರತಿಭೆ ಅನಾವರಣ ಹಾಗೂ ಆಟಗಾರರು ಬೆಳೆಯಲು ವೇದಿಕೆ ದೊರೆತಂತಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು, ನವೆಂಬರ್ ೬ ರಂದು ಬೆಳಿಗ್ಗೆ ೨ ಸೆಮಿಫೈನಲ್ ಪಂದ್ಯಾಟ ನಡೆದು ಅಂದೆ ಮಧ್ಯಾಹ್ನ ಫೈನಲ್ ಪಂದ್ಯಾವಳಿ ನಡೆಯಲಿದೆ ಎಂದು ವಿವರಿಸಿದರು.
ಅ.೨೭ ರಿಂದ ನಡೆಯುವ ಹಾಕಿ ನಮ್ಮೆಗೆ ಹೆಸರು ನೋಂದಾಯಿಸಿಕೊಳ್ಳುವ ತಂಡಗಳು ಪಾಂಡAಡ ಕೆ.ಬೋಪಣ್ಣ (೯೮೪೫೨ ೫೫೨೮೨), ಮಾಳೇಟಿರ ಎ.ಶ್ರೀನಿವಾಸ್ (೯೧೧೦೮ ೦೮೦೦೯) ಹಾಗೂ ಬಡಕಡ ಡೀನಾ ಪೂವಯ್ಯ (೯೫೩೫೬ ೦೨೭೦೩) ರನ್ನು ಸಂಪರ್ಕಿಸಬಹುದಾಗಿದೆ.
ಸುದ್ದಿಗೋಷ್ಠಿಯಲ್ಲಿ ಅಕಾಡೆಮಿಯ ಕಾರ್ಯಾಧ್ಯಕ್ಷ ಮೇಕೇರಿರ ರವಿ ಪೆಮ್ಮಯ್ಯ, ಮಡಿಕೇರಿ ತಾಲೂಕು ಉಪಾಧ್ಯಕ್ಷÀÀ ಬಡಕಡ ಡೀನಾ ಪೂವಯ್ಯ, ವೀರಾಜಪೇಟೆ ತಾಲ್ಲೂಕು ಉಪಾಧ್ಯಕ್ಷ ಮಾದಂಡ ಎಸ್.ಪೂವಯ್ಯ, ಸೋಮವಾರಪೇಟೆ ತಾಲೂಕು ಉಪಾಧ್ಯಕ್ಷ ಕುಕ್ಕೇರ ಜಯಾ ಚಿಣ್ಣಪ್ಪ ಹಾಗೂ ಕಾರ್ಯದರ್ಶಿ ಮಾಳೇಟಿರ ಎ.ಶ್ರೀನಿವಾಸ್ ಉಪಸ್ಥಿತರಿದ್ದರು.